Home Business BBMP Property Tax ಪಾವತಿಗೆ ಇಂದು ಕೊನೆಯ ದಿನ

BBMP Property Tax ಪಾವತಿಗೆ ಇಂದು ಕೊನೆಯ ದಿನ

240
BBMP


BBMP ಆಸ್ತಿ ತೆರಿಗೆ ಪಾವತಿಗೆ ಇಂದು (ಮಾರ್ಚ್ 31) ಕೊನೆಯ ದಿನವಾಗಿದೆ. ಇಂದು ತೆರಿಗೆ ಪಾವತಿಸದಿದ್ದರೆ, ನಾಳೆಯಿಂದ (ಏಪ್ರಿಲ್ 1) ದುಪ್ಪಟ್ಟು ತೆರಿಗೆ ಹಾಗೂ ಶೇ 9 ರ ಬಡ್ಡಿ ಪಾವತಿಸಬೇಕಾಗುತ್ತದೆ.


ತೆರಿಗೆ ಪಾವತಿ ಮಾಡಲು ಅವಕಾಶ ನೀಡುವಂತೆ BBMP ಕಂದಾಯ ಇಲಾಖೆ ಇಂದು ರಾತ್ರಿ 11 ರವರೆಗೆ ಕಾರ್ಯನಿರ್ವಹಿಸುತ್ತದೆ. ಈ ಕಾರಣದಿಂದ ರಂಜಾನ್ ರಜೆಯನ್ನು ರದ್ದುಗೊಳಿಸಲಾಗಿದೆ.

ಮಾರ್ಚ್ 31ರೊಳಗೆ ತೆರಿಗೆ ಪಾವತಿಸದಿದ್ದರೆ, ಏಪ್ರಿಲ್ 1ರಿಂದ ಎರಡು ಹಂತಗಳಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ. 2022-23 ಅಥವಾ ಅದಕ್ಕೂ ಮುಂಚಿನ ತೆರಿಗೆ ಬಾಕಿಗೆ ಶೇ 9ರ ಬಡ್ಡಿ, 2023-24 ಹಾಗೂ 2024-25 ಹಣಕಾಸು ವರ್ಷದ ಬಾಕಿಗೆ ಶೇ 15ರ ಬಡ್ಡಿ ವಿಧಿಸಲಾಗುತ್ತದೆ.

400 ಕೋಟಿ ರೂ. ತೆರಿಗೆ ಬಾಕಿ ಇರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಈಗಾಗಲೇ ಕಠಿಣ ಕ್ರಮ ಕೈಗೊಂಡಿದೆ. ತೆರಿಗೆ ಪಾವತಿಸದಿದ್ದರೆ ಆಸ್ತಿಗಳನ್ನು ಹರಾಜು ಮಾಡುವ ಸಾಧ್ಯತೆಯೂ ಇದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page