Search
WhatsApp alerts

Home › Business

ಆಸ್ತಿ ತೆರಿಗೆ ಪಾವತಿಸದವರಿಗೆ BBMP ಯ ಎಚ್ಚರಿಕೆ

administrator · Published

BBMP

Bengaluru: ಆಸ್ತಿ ತೆರಿಗೆ ಪಾವತಿಸದೆ ಇರುವ ಸುಸ್ತಿದಾರರಿಗೆ BBMP ನೋಟಿಸ್ ನೀಡಿದೆ. ತಕ್ಷಣ ಪಾವತಿ ಮಾಡದಿದ್ದರೆ, ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಚರ-ಸ್ಥಿರ ಆಸ್ತಿಗಳ ಮಾರಾಟ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು ನಗರದಲ್ಲಿ ಒಟ್ಟಾರೆ 2.75 ಲಕ್ಷ ಆಸ್ತಿ ಮಾಲೀಕರು ತೆರಿಗೆ ಪಾವತಿಸಿಲ್ಲ. ಇವರ ವಿರುದ್ಧ ಕ್ರಮಕ್ಕೆ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಆದೇಶ ನೀಡಿದ್ದಾರೆ. ತೆರಿಗೆ ಬಾಕಿ ಉಳಿಸಿಕೊಂಡವರು BBMPtax.karnataka.gov.in website  ಮೂಲಕ online ‌ನಲ್ಲಿ ಪಾವತಿಸಬೇಕೆಂದು ನೋಟಿಸಿನಲ್ಲಿ ಹೇಳಲಾಗಿದೆ.

ಮಹದೇವಪುರ ವಲಯದಲ್ಲಿ ಹೆಚ್ಚು ಮಂದಿ ತೆರಿಗೆ ಪಾವತಿಸಿಲ್ಲ. ಇಲ್ಲಿ 65,040 ಸುಸ್ತಿದಾರರು ಇದ್ದು, 197.90 ಕೋಟಿ ರೂ. ಬಾಕಿ ಇದೆ. ದಕ್ಷಿಣ ವಲಯದಲ್ಲಿ 25,162 ಸುಸ್ತಿದಾರರಿಂದ 116.81 ಕೋಟಿ ರೂ. ಬಾಕಿ ಉಳಿದಿದೆ.

ಪೂರ್ವ, ಬೊಮ್ಮನಹಳ್ಳಿ, ಯಲಹಂಕ, ಪಶ್ಚಿಮ, ರಾಜರಾಜೇಶ್ವರಿ ನಗರ ಹಾಗೂ ದಸರಹಳ್ಳಿ ವಲಯಗಳಲ್ಲಿಯೂ ಸಾಕಷ್ಟು ತೆರಿಗೆ ಪಾವತಿ ಆಗದೆ ಬಾಕಿ ಉಳಿದಿದೆ.

ನಗರದ ಎಲ್ಲಾ ವಲಯಗಳನ್ನು ಸೇರಿಸಿದಾಗ, ಬಿಬಿಎಂಪಿಗೆ 786.86 ಕೋಟಿ ರೂ. ತೆರಿಗೆ ಬಾಕಿ ಉಳಿದು ಭಾರೀ ನಷ್ಟವಾಗಿದೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page