back to top
18.4 C
Bengaluru
Wednesday, January 14, 2026
HomeNewsBelgium ಕೋರ್ಟ್ Mehul Choksi ಯನ್ನು ಭಾರತಕ್ಕೆ ಹಸ್ತಾಂತರಿಸಲು ಆದೇಶಿಸಿದೆ

Belgium ಕೋರ್ಟ್ Mehul Choksi ಯನ್ನು ಭಾರತಕ್ಕೆ ಹಸ್ತಾಂತರಿಸಲು ಆದೇಶಿಸಿದೆ

- Advertisement -
- Advertisement -

New Delhi: ಭಾರತದಿಂದ ಪಲಾಯನಗೊಂಡ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ (Mehul Choksi) ಭಾರತಕ್ಕೆ ಮರಳಿ ಬರಲಿದ್ದಾರೆ. ಬೆಲ್ಜಿಯಂನ ಆಂಟ್ವೆರ್ಪ್ ನ್ಯಾಯಾಲಯ ಅವರು ಹಸ್ತಾಂತರವಾಗಬೇಕು ಎಂದು ಆದೇಶಿಸಿದೆ. ಬೆಲ್ಜಿಯಂ ಅಧಿಕಾರಿಗಳು ಮೆಹುಲ್ ಚೋಕ್ಸಿಯನ್ನು ಬಂಧಿಸಿರುವುದು ನ್ಯಾಯೋಚಿತವಾಗಿದೆ ಎಂದು ಕೋರ್ಟ್ ಹೇಳಿದೆ.

ಮೆಹುಲ್ ಚೋಕ್ಸಿ ಮೇಲ್ಮನವಿ ಸಲ್ಲಿಸಲು ಸಾಧ್ಯತೆ ಇದ್ದರೂ, ಈ ಆದೇಶ ಪ್ರಕರಣದಲ್ಲಿ ಮುಖ್ಯ ಮೈಲಿಗಲ್ಲೆಂದು ಹೇಳಲಾಗಿದೆ. ಭಾರತದ ಹಿರಿಯ ಅಧಿಕಾರಿಯೊಬ್ಬರು, ಕೋರ್ಟ್ ಆದೇಶ ನಮ್ಮ ಪರವಾಗಿ ಬಂದಿದೆ. ಭಾರತ ಕೋರಿಕೆಯ ಮೇರೆಗೆ ಬೆಲ್ಜಿಯಂ ಅಧಿಕಾರಿಗಳಿಂದ ಅವರ ಬಂಧನ ಮಾನ್ಯವಾಗಿದೆ. ಹಸ್ತಾಂತರ ಪ್ರಕ್ರಿಯೆ ಆರಂಭವಾಗಿದೆ ಎಂದಿದ್ದಾರೆ.

ಸಿಬಿಐ ಕೋರಿಕೆಯ ಮೇರೆಗೆ 65 ವರ್ಷದ ಮೆಹುಲ್ ಚೋಕ್ಸಿ ಏಪ್ರಿಲ್ 11ರಂದು ಬಂಧಿಸಲ್ಪಟ್ಟಿದ್ದರು. ಅವರು 4 ತಿಂಗಳಿಗಿಂತ ಹೆಚ್ಚು ಬೆಲ್ಜಿಯಂನಲ್ಲಿ ಬಂಧಿತರಾಗಿದ್ದರು. ಅಲ್ಲಿನ ವಿವಿಧ ನ್ಯಾಯಾಲಯಗಳು ಅವರ ಜಾಮೀನು ಅರ್ಜಿಗಳನ್ನು ನಿರಾಕರಿಸಿದ್ದವು.

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಹಗರಣವು ಭಾರತದ ಇತಿಹಾಸದಲ್ಲಿಯೇ ಅತಿದೊಡ್ಡ ಹಣಕಾಸು ವಂಚನೆಗಳಲ್ಲಿ ಒಂದಾಗಿದೆ. ಇದರಲ್ಲಿ ಸುಮಾರು 13,000 ಕೋಟಿ ರೂ. ವಂಚನೆಯ ವಹಿವಾಟುಗಳು ನಡೆದಿವೆ. ಈ ಹಗರಣ 2018ರಲ್ಲಿ ಬೆಳಕಿಗೆ ಬಂದಿದೆ. ಮೊದಲು ನೀರವ್ ಮೋದಿ, ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ಮತ್ತು ಕೆಲವು PNB ಉದ್ಯೋಗಿಗಳು ಈ ವಂಚನೆಯಲ್ಲಿ ಭಾಗಿಯಾಗಿದ್ದರು.

ವಿದೇಶಿ ಸಾಲಕ್ಕಾಗಿ ನೀಡಲಾಗುವ ಬ್ಯಾಂಕ್ ಗ್ಯಾರಂಟಿ (LoU)ಗಳನ್ನು ದುರುಪಯೋಗ ಮಾಡಲಾಗಿದೆ. 2011 ರಿಂದ 2018 ರವರೆಗೆ PNB ಮುಂಬೈ ಬ್ರಾಡಿ ಹೌಸ್ ಶಾಖೆಯ ಕೆಲವು ಉದ್ಯೋಗಿಗಳು ಅವುಗಳನ್ನು ಬ್ಯಾಂಕ್ ಕೋರ್ ಸಿಸ್ಟಮ್‌ನಲ್ಲಿ ದಾಖಲಿಸದೆ, SWIFT ಸಿಸ್ಟಮ್ ಮೂಲಕ ಅನಧಿಕೃತ LoUಗಳನ್ನು ನೀಡಿದ್ದರು. ಇದಾದ ನಂತರ ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಭಾರತ ಬಿಟ್ಟು ಪಲಾಯನಗೊಂಡಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page