Bellary : ಕಾನಹೊಸಹಳ್ಳಿ ಸಮೀಪದ ಸೊನ್ನಮರಡಿ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ (Sonnamaradi Sri Veerabhadreshawara Swamy Rathotsava) ಬುಧವಾರ ಸಂಜೆ ಸರಳವಾಗಿ ಶ್ರದ್ಧಾ,ಭಕ್ತಿಯಿಂದ ನಡೆಯಿತು.
ಸಕಲ ವಾದ್ಯವೃಂದದೊಂದಿಗೆ ವೀರಭದ್ರೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದ ಬಳಿ ತಂದು, ಪ್ರದಕ್ಷಿಣೆ ಹಾಕಿ ಪ್ರತಿಷ್ಠಾಪಿಸಲಾಯಿತು. ರಥ ಮುಂದೆ ಸಾಗುತ್ತಿದಂತೆ ವೀರಭದ್ರೇಶ್ವರ ಸ್ವಾಮಿಯ ಸಕಲ ಬಿರುದಾವಳಿಗಳ ಜಯಘೋಷ ಮೊಳಗಿತು. ನೆರದಿದ್ದ ಭಕ್ತರು ಬಾಳೆ ಹಣ್ಣು, ಉತ್ತುತ್ತಿ ಎಸೆದು ಭಕ್ತಿ ಸಮರ್ಪಿಸಿದರು.
₹31,000ಗೆ ಸ್ವಾಮಿಯ ಪಟಾಕ್ಷಿಯನ್ನು ಅಬ್ಬೇನಹಳ್ಳಿ ರೇವಣ್ಣ ಪಡೆದುಕೊಂಡರು. ಹುಲಿಕೇರೆ, ಬಯಲುತುಂಬರಗುದ್ದಿ, ಹೊಸಹಳ್ಳಿ, ಹಿರೇಕುಂಬಳಗುಂಟೆ, ದಾಸಬೊನಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಎತ್ತಿನ ಗಾಡಿಗಳಿಗೆ ಸಿಂಗಾರ ಮಾಡಿಕೊಂಡು ಬಂದು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.