Belur, Hassan : ಪ್ರಗತಿಪರ ಸಂಘಟನೆಯಿಂದ ಬೇಲೂರು ತಾಲ್ಲೂಕಿನ ಮದಘಟ್ಟ ಪಂಚಾಯಿತಿ ವ್ಯಾಪ್ತಿಯ ತಾರೀಮರ ಗ್ರಾಮದಲ್ಲಿ ಮಂಗಳವಾರ ಬುದ್ಧ (Buddha), ಬಸವ (Basavanna), ಅಂಬೇಡ್ಕರ್ (Ambedkar) ಅವರ ಕಂಚಿನ ಪ್ರತಿಮೆ (Bronze Statue) ಸ್ಥಾಪನೆಗೆ ಭೂಮಿಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಗಾಂಧಾರ ಬುದ್ಧ ವಿಹಾರದ ಅಧ್ಯಕ್ಷ ಬೋಧಿದತ್ತ ಮಹಾಥೇರ ಭಂತೇಜಿ ಮಾತನಾಡಿ “‘ಪ್ರತಿಮೆಗಳ ಸ್ಥಾಪನೆಗೆ ಗ್ರಾಮಸ್ಥರೆಲ್ಲ ಸಹಕಾರ ನೀಡುತ್ತಿರುವುದು ಶ್ಲಾಘನೀಯ, ದಾರ್ಶನಿಕರ ಪ್ರತಿಮೆಗಳನ್ನು ಮಾತ್ರ ನಿರ್ಮಿಸಿದೇ ಅವರ ಸಂದೇಶಗಳನ್ನು ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಗಾಂಧಾರ ಬುದ್ಧ ವಿಹಾರದ ಸಮೀಪದಲ್ಲಿ ಎಲ್ಲ ಸಮಾಜದವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಶ್ವವಿದ್ಯಾಲಯ ಸ್ಥಾಪಿಸಲು ಮುಂದಾಗಿದ್ದು ಎಲ್ಲರ ಸಹಕಾರ ಅಗತ್ಯ” ಎಂದು ಹೇಳಿದರು.
KPCC ಕಾರ್ಯಾಧ್ಯಕ್ಷ ಧ್ರುವನಾರಾಯಣ್, KPCC ಉಪಾಧ್ಯಕ್ಷ ಬಿ.ಶಿವರಾಂ, ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ ಇ.ಎಚ್. ಲಕ್ಷ್ಮಣ್, ಪುರಸಭೆ ಅಧ್ಯಕ್ಷ ದಾನಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಂಜಿತ್, ಗಾಂಧಾರ ಬುದ್ಧ ವಿಹಾರ ಟ್ರಸ್ಟ್ ಕಾರ್ಯದರ್ಶಿ ರಾಜು, ಉದ್ಯಮಿ ಎಸ್.ಎಚ್.ರಾಜಶೇಖರ್, ಮುಖಂಡರಾದ ಎಂ.ಆರ್.ವೆಂಕಟೇಶ್, ಬಿ.ಡಿ.ಚಂದ್ರೇಗೌಡ, ನಟರಾಜ್, ಮಂಜುನಾಥ್, ಶಶಿಧರ್ ಮೌರ್ಯ, ಯೋಗೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.