Bengaluru: ನಗರದ ಹೆಣ್ಣೂರಿನಲ್ಲಿರುವ ಬಾಬುಸಾಬ್ ಪಾಳ್ಯದಲ್ಲಿ (Babusab Palya) ಕಟ್ಟಡ ಕುಸಿತಗೊಂಡು 8 ಮಂದಿ ಕಾರ್ಮಿಕರು ಮೃತಪಟ್ಟು, ಹತ್ತಾರು ಕಾರ್ಮಿಕರು ಗಾಯಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು (Prime Minister Narendra Modi) ಈ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಹಾಗೂ ಗಾಯಗೊಂಡವರ ನೆರವಿಗೆ ಧಾವಿಸಿದ್ದಾರೆ.
ಪ್ರಧಾನಿ ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯಿಂದ ಘಟನೆಯಲ್ಲಿ ಮೃತಪಟ್ಟ ಪ್ರತಿಯೊಂದು ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಜೊತೆಗೆ, ಗಾಯಗೊಂಡಿವರಿಗೆ ತಲಾ 50 ಸಾವಿರ ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ.
X ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಾಪ ವ್ಯಕ್ತಪಡಿಸಿರುವ ಅವರು, ಮೃತ ಕಾರ್ಮಿಕರ ಕುಟುಂಬಸ್ಥರಲ್ಲಿ ನಾನು ಭಾಗಿಯಾಗಿದ್ದೇನೆ. ಗಾಯಾಳುಗಳು ಬೇಗನೇ ಚೇತರಿಸಿಕೊಳ್ಳಲಿ ಎಂದು ಅವರು ಹಾರೈಸಿದ್ದಾರೆ.
ಈ ನಡುವೆ, ಘಟನೆಯಲ್ಲಿ ಮೃತಪಟ್ಟ 8 ಮಂದಿಯ ಕಾರ್ಮಿಕರ ದೇಹಗಳನ್ನು ಕಟ್ಟಡದಿಂದ ಹೊರತಗೆಯಲಾಗಿದೆ. ಮಂಗಳವಾರ ಸಂಜೆಯಿಂದಲೂ ನಡೆಯುತ್ತಿರುವ ಪರಿಹಾರ ಕಾರ್ಯಗಳಲ್ಲಿ ಎನ್ ಡಿ ಆರ್ ಎಫ್, ಎಸ್ ಡಿಆರ್ ಎಫ್ ಸಿಬ್ಬಂದಿಯು ನಿರಂತರವಾಗಿ ಶೋಧ ನಡೆಸಿ ಈವರೆಗೆ 14 ಜನರನ್ನು ರಕ್ಷಿಸಿದ್ದಾರೆ.
ಕೇವಲ 40x 60 ಅಳತೆಯ ಸೈಟಿನಲ್ಲಿ ಅಪಾರ್ಟ್ ಮೆಂಟ್ ಕಟ್ಟಲು ಹೋಗಿದ್ದು ಹಾಗೂ 3 ಫ್ಲೋರ್ ಗಳಿಗೆ ಅನುಮತಿ ಪಡೆದು ಆರು ಫ್ಲೋರ್ ವರೆಗೆ ಕಟ್ಟಡ ನಿರ್ಮಿಸಿತ್ತು.
ಕಟ್ಟಡವು ನಿರ್ಮಾಣ ಹಂತದಲ್ಲಿದ್ದಾಗಲೇ ಮಾಲೀಕರಿಗೆ BBMP ನೋಟಿಸ್ ನೀಡಲಾಗಿತ್ತು. ಏಪ್ರಿಲ್ 1, ಸೆಪ್ಟಂಬರ್ 2ರಂದು ನೋಟಿಸ್ ನೀಡಲಾಗಿತ್ತು. ಈ ಯಾವುದೇ ನೋಟಿಸ್ ಗೆ ಉತ್ತರ ನೀಡಿರಲಿಲ್ಲ.
ಸೂಕ್ತ ಕ್ರಮ ಕೈಗೊಳ್ಳಲದೇ BBMPಯೂ ಸುಮ್ಮನಾಗಿತ್ತು. ಆ ಕಾರಣಕ್ಕಾಗಿ ಈಗ ದುರಂತ ಸಂಭವಿಸಿದ ಮೇಲೆ ಹೊರಮಾವು ಉಪವಿಭಾಗದ AEE ವಿನಯ್ ಎಂಬುವರನ್ನು ಅಮಾನತು ಮಾಡಲಾಗಿದೆ. ಹೆಣ್ಣೂರು ಠಾಣೆಯ ಪೊಲೀಸರು ಕಟ್ಟಡದ ಮಾಲೀಕ ಭುವನ್, ಮುನಿರೆಡ್ಡಿ, ಗುತ್ತಿಗೆದಾರ ಮುನಿಯಪ್ಪನನ್ನು ಬಂಧಿಸಿದ್ದಾರೆ.