Bengaluru, Bangalore : ಬೆಂಗಳೂರು ನಗರದಲ್ಲಿ ಕಳೆದ ಏಪ್ರಿಲ್, ಮೇ ತಿಂಗಳಲ್ಲಿ 50ರ ಆಸುಪಾಸಿನಲ್ಲಿದ್ದ ದೈನಂದಿನ Covid ಸೋಂಕಿತರ ಸಂಖ್ಯೆ ಒಂದು ವಾರದಲ್ಲಿ 2,623 ಮಂದಿಗೆ ಕೊರೊನಾ ಸೋಂಕು ತಗುಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,496ಕ್ಕೆ ಏರಿಕೆಯಾಗಿದೆ (Increase).
ಕಳೆದ ವಾರದಲ್ಲಿ 1,455 ಮಂದಿ ಚೇತರಿಸಿಕೊಂಡಿದ್ದು ಹೊಸದಾಗಿ ಮರಣ ಪ್ರಕರಣ ವರದಿಯಾಗಿಲ್ಲ.ಕೋವಿಡ್ ಪೀಡಿತರ ಸಂಖ್ಯೆ 17.91 ಲಕ್ಷ ದಾಟಿದೆ. ಅವರಲ್ಲಿ 17.71 ಲಕ್ಷಕ್ಕೂ ಅಧಿಕ ಮಂದಿ ಚೇತರಿಸಿಕೊಂಡಿದ್ದಾರೆ.ಸೋಂಕು ದೃಢಪ್ರಮಾಣ ಶೇ 2.15ರಷ್ಟಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಆರೋಗ್ಯ ಇಲಾಖೆ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಹಾಗು ಸಾಮಾಜಿಕ ಅಂತರವನ್ನು ಖಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿದೆ.