Search
WhatsApp alerts

Home › Bengaluru Urban

Bengaluru: ಮತ್ತೆ ಸಾವಿರಾರು ಮರಗಳ ಕಟಾವು ಆತಂಕ

administrator · Published

Bengaluru: Fears of felling of thousands of trees again

ಬೆಂಗಳೂರು ಮೆಟ್ರೋ ಮೂರನೇ ಹಂತ (Metro Phase 3) ಯೋಜನೆಗಾಗಿ 6500ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಹಾಗೂ ಸ್ಥಳಾಂತರಿಸಲು BMRCL ತೀರ್ಮಾನಿಸಿದೆ.

ಎರಡು ಕಾರಿಡಾರ್‌ಗಳ ಮಾರ್ಗ

  • 1ನೇ ಕಾರಿಡಾರ್: ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ, 32.15 ಕಿಮೀ, 21 ನಿಲ್ದಾಣಗಳು
  • 2ನೇ ಕಾರಿಡಾರ್: ಹೊಸಹಳ್ಳಿಯಿಂದ ಕಡಬಗೆರೆಯವರೆಗೆ, 12.50 ಕಿಮೀ, 9 ನಿಲ್ದಾಣಗಳು
  • ಒಟ್ಟು ಉದ್ದ ಮತ್ತು ವೆಚ್ಚ: ಮೂರನೇ ಹಂತದ ಮೆಟ್ರೋ ಮಾರ್ಗ ಒಟ್ಟು 44.65 ಕಿಮೀ ಉದ್ದವಿದ್ದು, ಕಾಮಗಾರಿಗೆ 15,611 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.

ಮರಗಳ ಕಟಾವಿಗೆ ಸಂಬಂಧಿಸಿ ಪರಿಸರ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಕುರಿತು ಮೆಟ್ರೋ ಅಧಿಕಾರಿಗಳೊಂದಿಗೆ ಸಭೆಯೂ ನಡೆದಿದ್ದು, ನೂರಾರು ಹೋರಾಟಗಾರರು ಭಾಗಿಯಾಗಿದ್ದಾರೆ.

ಹಿಂದೆ ಕಿತ್ತಳೆ ಮಾರ್ಗ ಕಾಮಗಾರಿ ವೇಳೆ 11 ಸಾವಿರ ಮರಗಳನ್ನು ಕಡಿಯಲು ಬಿಎಂಆರ್ಸಿಎಲ್ ಮುಂದಾಗಿತ್ತು. ಪರಿಸರ ಹೋರಾಟಗಾರರ ಒತ್ತಡದಿಂದ ಆ ಸಂಖ್ಯೆಯನ್ನು ಕಡಿತಗೊಳಿಸಲಾಗಿತ್ತು.

ನಗರದಲ್ಲಿ ಈಗಾಗಲೇ ಶುದ್ಧವಾದ ಗಾಳಿ ಕೊರತೆ ಉಂಟಾಗಿದೆ. ಇನ್ನೂ ಮರಗಳನ್ನು ಕಡಿದರೆ, ಬೆಂಗಳೂರು ದೆಹಲಿಯಂತೆ ಮಾಲಿನ್ಯ ನಗರವಾಗುವುದರಲ್ಲಿ ಸಂದೇಹವಿಲ್ಲ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page