Search
WhatsApp alerts

Home › Business

ಬೆಂಗಳೂರು-ಮುಂಬೈ, ಕೋಲ್ಕತ್ತಾ ವಿಶೇಷ ರೈಲು

administrator · Published

Bengaluru-Mumbai, Kolkata special train

Bengaluru: ಬೇಸಿಗೆ ರಜೆ ಮತ್ತು ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ರೈಲ್ವೆ (Indian Railways) ಬೆಂಗಳೂರಿನಿಂದ ಮುಂಬೈ ಮತ್ತು ಕೋಲ್ಕತ್ತಾ (ಸಾಂತ್ರಗಚಿ) ಕಡೆಗೆ ವಿಶೇಷ ರೈಲುಗಳನ್ನು ನಡೆಸಲಿದೆ. ಈ ವಿಶೇಷ ರೈಲುಗಳ ವೇಳಾಪಟ್ಟಿ ಮತ್ತು ನಿಲುಗಡೆಗಳ ವಿವರಗಳನ್ನು ರೈಲ್ವೆ ಇಲಾಖೆ ಪ್ರಕಟಿಸಿದೆ.

ಬೆಂಗಳೂರು-ಮುಂಬೈ ವಿಶೇಷ ರೈಲು ವೇಳಾಪಟ್ಟಿ

  • ರೈಲು ಸಂಖ್ಯೆ 01013: ಸಿಎಸ್ಎಂಟಿ ಮುಂಬೈ – ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್
  • ಪ್ರಯಾಣ ದಿನಗಳು: ಏಪ್ರಿಲ್ 5, 12, 19, 26, ಮೇ 3, 10, 17, 24, 31 ಮತ್ತು ಜೂನ್ 7, 14, 21, 28
  • ಹೊರಟು: ಮುಂಬೈ ಸಿಎಸ್ಎಂಟಿ (ರಾತ್ರಿ 12.30)
  • ತಲುಪುವ ಸಮಯ: ಬೆಂಗಳೂರು ಎಸ್ಎಂವಿಟಿ (ರಾತ್ರಿ 11.55)
  • ರೈಲು ಸಂಖ್ಯೆ 01014: ಎಸ್ಎಂವಿಟಿ ಬೆಂಗಳೂರು – ಸಿಎಸ್ಎಂಟಿ ಮುಂಬೈ ವಿಶೇಷ ಎಕ್ಸ್‌ಪ್ರೆಸ್
  • ಪ್ರಯಾಣ ದಿನಗಳು: ಏಪ್ರಿಲ್ 6, 13, 20, 27, ಮೇ 4, 11, 18, 25 ಮತ್ತು ಜೂನ್ 1, 8, 15, 22, 29
  • ಹೊರಟು: ಬೆಂಗಳೂರು ಎಸ್ಎಂವಿಟಿ (ಬೆಳಿಗ್ಗೆ 4.40)
  • ತಲುಪುವ ಸಮಯ: ಮುಂಬೈ ಸಿಎಸ್ಎಂಟಿ (ಮರುದಿನ ಬೆಳಿಗ್ಗೆ 4.05)

ಈ ರೈಲು ಎಲ್ಲಿ ನಿಲುಗಡೆ ಮಾಡಲಿದೆ?

ದಾದರ್, ಥಾಣೆ, ಕಲ್ಯಾಣ್, ಲೋನಾವಾಲಾ, ಪುಣೆ, ಸತಾರಾ, ಕರಾಡ್, ಸಾಂಗ್ಲಿ, ಮೀರಜ್, ಕುಡಚಿ, ರಾಯಬಾಗ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು, ತುಮಕೂರು ಸೇರಿದಂತೆ ಹಲವಾರು ನಿಲ್ದಾಣಗಳಲ್ಲಿ ರೈಲು ನಿಲ್ಲಲಿದೆ.

ಸಾಂತ್ರಗಚಿ – ಯಶವಂತಪುರ ವಿಶೇಷ ರೈಲು ವೇಳಾಪಟ್ಟಿ

  • ರೈಲು ಸಂಖ್ಯೆ 02863: ಸಾಂತ್ರಗಚಿ – ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್
  • ಪ್ರಯಾಣ ದಿನಗಳು: ಏಪ್ರಿಲ್ 3, 10, 17, 24
  • ಹೊರಟು: ಸಾಂತ್ರಗಚಿ (ಮಧ್ಯಾಹ್ನ 12.50)
  • ತಲುಪುವ ಸಮಯ: ಯಶವಂತಪುರ (ಶನಿವಾರ ಬೆಳಿಗ್ಗೆ 12.55)
  • ರೈಲು ಸಂಖ್ಯೆ 02864: ಯಶವಂತಪುರ – ಸಾಂತ್ರಗಚಿ ವಿಶೇಷ ಎಕ್ಸ್‌ಪ್ರೆಸ್
  • ಪ್ರಯಾಣ ದಿನಗಳು: ಏಪ್ರಿಲ್ 5, 12, 19, 26
  • ಹೊರಟು: ಯಶವಂತಪುರ (ಬೆಳಿಗ್ಗೆ 4.30)
  • ತಲುಪುವ ಸಮಯ: ಸಾಂತ್ರಗಚಿ (ಭಾನುವಾರ ಮಧ್ಯಾಹ್ನ 1.25)

ನಿಲುಗಡೆಗಳು: ಖರಾಗ್ಪುರ, ಭುವನೇಶ್ವರ, ವಿಜಯವಾಡ, ಗುಂಟೂರು, ಅನಂತಪುರ, ಧರ್ಮಾವರಂ, ಹಿಂದೂಪುರ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಈ ರೈಲು ನಿಲ್ಲಲಿದೆ. ಪ್ರಯಾಣಿಕರು ಈ ವಿಶೇಷ ರೈಲುಗಳ ಸೌಲಭ್ಯವನ್ನು ಪಡೆದುಕೊಳ್ಳಬಹುದು.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page