Bengaluru (Bangalore) : ಬೆಂಗಳೂರು ಅರಮನೆ ಮೈದಾನ (Palace Ground) ದಲ್ಲಿ ಭಾನುವಾರ ಈಶಾ ಫೌಂಡೇಶನ್ (Isha Foundation) ವತಿಯಿಂದ ‘ಮಣ್ಣು ಉಳಿಸಿ’ (Save Soil) ಅಭಿಯಾನ ಕಾರ್ಯಕ್ರಮದ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಈಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು (Sadguru) ಜಗ್ಗಿ ವಾಸುದೇವ್ (Jaggi Vasudev) “ಮಣ್ಣಿನ ಮಹತ್ವ ಬಹಳ ದೊಡ್ಡದು. ಮಣ್ಣಿನ ಫಲವತ್ತತೆ ಉಳಿಸಲು ಎಲ್ಲರೂ ಪ್ರಯತ್ನಿಸಬೇಕು. ನಾವು ಇದುವರೆಗೂ 320 ಕೋಟಿ ಜನರನ್ನು ತಲುಪಿದ್ದು ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಮಣ್ಣು ಉಳಿಸಲು ಸ್ವಯಂ ಸೇವಕರು ಸಾಕಷ್ಟು ಶ್ರಮ ಹಾಕಿದ್ದಾರೆ. ಮಣ್ಣಿನ ಫಲವತ್ತತೆ ಉಳಿದರೆ ರೈತರು ಉಳಿಯಲಿದ್ದಾರೆ. ನಮ್ಮ ಸುಂದರ ಕನಸುಗಳು ಉಳಿಯಲಿವೆ” ಎಂದು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮಾತನಾಡಿ “‘‘BSY ನೇತೃತ್ವದ ಸರ್ಕಾರದ ಅವಧಿಯಲ್ಲಿ ಮಣ್ಣಿನಲ್ಲಿ ಪೋಷಕಾಂಶ ವೃದ್ಧಿಗೆ ಭೂಚೇತನ ಯೋಜನೆ ತಂದಿತ್ತು. ನಮ್ಮ ಸರ್ಕಾರ ಮಣ್ಣು ಉಳಿಸಲು ಮೊದಲ ಆದ್ಯತೆ ನೀಡಲಿದೆ. ರಾಜ್ಯದಲ್ಲಿ 2.50 ಲಕ್ಷ ಹೆಕ್ಟೇರ್ ಬಂಜರು ಭೂಮಿಯ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು. ಪರಿಸರ ರಕ್ಷಣೆಗೆ ಬಜೆಟ್‌ನಲ್ಲಿ ₹ 100 ಅನುದಾನ ಮೀಸಲಿಡಲಾಗಿದೆರಾಜ್ಯದಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿ ಶೇ 33 ರಿಂದ ಶೇ 24ಕ್ಕೆ ಕುಗ್ಗಿದೆ. ಐದು ವರ್ಷಗಳಲ್ಲಿ ಅರಣ್ಯ ಪ್ರದೇಶವನ್ನು ಶೇ 30ಕ್ಕೆ ಹೆಚ್ಚಿಸಲು ಪ್ರಯತ್ನಿಸಲಾಗುವುದು. ರೈತರೊಂದಿಗೆ ನಗರವಾಸಿಗಳು ಕೈಜೋಡಿಸಬೇಕಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಬಿ.ಎಸ್.ಯಡಿಯೂರಪ್ಪ (B. S. Yediyurappa), ಸಚಿವರಾದ ಡಾ.ಕೆ.ಸುಧಾಕರ್ (K. Sudhakar), ಬಿ.ಸಿ.ನಾಗೇಶ್ (B C Nagesh) ಮತ್ತಿತರರು ಉಪಸ್ಥಿತರಿದ್ದರು.