Bengaluru: ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗೆವರೆಗೆ ನಗರದ ಹಲವೆಡೆ ಸುರಿದ ಭಾರೀ ಮಳೆಯಿಂದ (Heavy rains) ಜನಜೀವನ ಅಸ್ತವ್ಯಸ್ತಗೊಂಡಿದೆ. ಮನೆಗಳು ಮತ್ತು ವಸತಿ ಸಂಕೀರ್ಣಗಳು ಜಲಾವೃತಗೊಂಡಿವೆ, ಕಾಂಪೌಂಡ್ ಗೋಡೆ ಕುಸಿದು ಅನೇಕ ದ್ವಿಚಕ್ರ ವಾಹನಗಳಿಗೆ (two-wheelers) ಹಾನಿಯಾಗಿದೆ.
ಬೆಂಗಳೂರಿನ ಹೆಚ್ಚು ಕಡಿಮೆ ಎಲ್ಲಾ ರಸ್ತೆಗಳಲ್ಲಿ ಭಾರೀ ನೀರು ನಿಂತಿದ್ದು, ಟ್ರಾಫಿಕ್ ಜಾಮ್ನಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಅದರಲ್ಲೂ ಬಳ್ಳಾರಿ ರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲು ನಿಂತಿವೆ. ಮೈಸೂರು – ನಾಯಂಡಹಳ್ಳಿ ರಸ್ತೆ ಸಂಪೂರ್ಣವಾಗಿ ಬ್ಲಾಕ್ ಆಗಿದೆ.
ಕೆಲವೆಡೆ ಮೊಣಕಾಲೆತ್ತರ ನೀರು ನಿಂತಿದ್ದು, ರಸ್ತೆ ಯಾವುದು, ಫುಟ್ಪಾತ್ ಯಾವುದು, ಹೊಂಡ ಯಾವುದು ಗೊತ್ತಾಗದೇ ವಾಹನ ಸವಾರರು ಪರದಾಡುತ್ತಿದ್ದಾರೆ. ಇನ್ನೊಂದೆಡೆ ಅಕಾಲಿಕ ಜಡಿ ಮಳೆಯಲ್ಲಿ ಟ್ರಾಫಿಕ್ ನಿರ್ವಹಿಸಲು ಪೊಲೀಸರು ಒದ್ದಾಡುತ್ತಿದ್ದಾರೆ.
ಇದೀಗ ಬೆಂಗಳೂರು ಜನರಿಗೆ ಹವಾಮಾನ ಇಲಾಖೆ ಎಚ್ಚರಿಕೆಯ ಸೂಚನೆ ನೀಡಿದೆ. ಈ ಸೂಚನೆ ಪ್ರಕಾರ ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಸೂಚನೆಯಿದೆ.
ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಜೋರಾಗಿಯೇ ಇದೆ. ಇದೀಗ ಹವಾಮಾನ ಇಲಾಖೆ ಸೂಚನೆಯೊಂದನ್ನು ನೀಡಿದ್ದು, ಬೆಂಗಳೂರು ಜನರಿಗೆ ಎಚ್ಚರಿಕೆಯಿಂದಿರುವುದು ಒಳ್ಳೆಯದು.