Home News Bengaluru startup Minus Zero ನಿಂದ ಹೊಸ AI Autopilot ತಂತ್ರಜ್ಞಾನ ಬಿಡುಗಡೆ

Bengaluru startup Minus Zero ನಿಂದ ಹೊಸ AI Autopilot ತಂತ್ರಜ್ಞಾನ ಬಿಡುಗಡೆ

132
Bengaluru-based deep tech startup Minus Zero

ಬೆಂಗಳೂರು ಮೂಲದ ಡೀಪ್ ಟೆಕ್ ಸ್ಟಾರ್ಟ್ಅಪ್ ಮೈನಸ್ ಝೀರೋ (Bengaluru-based deep tech startup Minus Zero) ಭಾರತೀಯ ರಸ್ತೆಗಳಿಗೆ ವಿಶೇಷವಾಗಿ ರೂಪಿಸಿದ ಎಐ ಚಾಲಿತ ಆಟೋಪೈಲಟ್ ಸಿಸ್ಟಮ್ (AI autopilot) ಅನ್ನು ಬಿಡುಗಡೆ ಮಾಡಿದೆ. ಈ ಸಿಸ್ಟಮ್ ನಗರ ರಸ್ತೆಗಳಲ್ಲಿರುವ ದಟ್ಟಣೆ, ತಳ್ಳುಗಾಡಿಗಳು ಮತ್ತು ದ್ವಿಚಕ್ರ ವಾಹನಗಳಂತಹ ಅಡೆತಡೆಗಳನ್ನು ಸುಗಮವಾಗಿ ತಪ್ಪಿಸುತ್ತಿದೆ.

ಆಟೋಪೈಲಟ್: ಹೊಸ ಕ್ಯಾಮೆರಾ – ಫಸ್ಟ್ ತಂತ್ರಜ್ಞಾನ: ಮೈನಸ್ ಝೀರೋ ಆಟೋಪೈಲಟ್, ದುಬಾರಿ ಸೆನ್ಸಾರ್‌ಗಳು ಮತ್ತು ನಿಯಮಿತ ಪ್ರೋಗ್ರಾಮಿಂಗ್ ಅವಲಂಬನೆಯ ಜಾಗತಿಕ ಸ್ವಾಯತ್ತ ಚಾಲನಾ ವ್ಯವಸ್ಥೆಗಳಿಗಿಂತ ವಿಭಿನ್ನವಾಗಿದ್ದು, ಕ್ಯಾಮೆರಾ – ಫಸ್ಟ್ ತಂತ್ರಜ್ಞಾನ ಬಳಸಿ ಕಾರ್ಯನಿರ್ವಹಿಸುತ್ತದೆ. ಇದು ದೊಡ್ಡ ಪ್ರಮಾಣದ ಅಸಂರಚಿತ ಡೇಟಾ ಬಳಸಿ ತರಬೇತಿ ಪಡೆಯುತ್ತದೆ ಮತ್ತು ಮಾನವ ಲೇಬಲ್ ಡೇಟಾ ಅಥವಾ ಹೈ-ಡಿಫಿನಿಷನ್ ಮ್ಯಾಪ್ಗಳ ಅವಶ್ಯಕತೆ ಇಲ್ಲದೆ ಚಾಲನೆ ಕಲಿಯುತ್ತದೆ.

ಮೈನಸ್ ಝೀರೋ ಸಿಇಒ ಗಗನ್ದೀಪ್ ರೀಹಾಲ್ ಅವರ ಪ್ರಕಾರ, ಈ ಸಿಸ್ಟಮ್ ಚಾಲಕರಹಿತವಲ್ಲ, ಆದರೆ ಇದು ಉನ್ನತ ಮಟ್ಟದ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಆಗಿದ್ದು, ಕಿರಿದಾದ ರಸ್ತೆಗಳಲ್ಲಿಯೂ ಲೇನ್ ಗುರುತುಗಳೊಂದಿಗೆ ಅಥವಾ ಇಲ್ಲದೆ ಕಾರ್ಯನಿರ್ವಹಿಸುತ್ತದೆ.

ಕನಿಷ್ಠ ಹಾರ್ಡ್ವೇರ್, ಮ್ಯಾಪ್ ಇಲ್ಲದೆ ಕಾರ್ಯನಿರ್ವಹಣೆ: ಈ ಸಿಸ್ಟಮ್ ಕನಿಷ್ಠ ಹಾರ್ಡ್ವೇರ್ ಮಾತ್ರ ಬೇಕಾಗಿದ್ದು, ಮ್ಯಾಪ್ ಗಳಿಲ್ಲದೇ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಮೈನಸ್ ಝೀರೋ ಹಂತ ಹಂತವಾಗಿ ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಿದೆ ಮತ್ತು ಎರಡು ವರ್ಷಗಳಲ್ಲಿ ಉತ್ಪಾದನೆಗೆ ಸಿದ್ಧವಾಗಲು ಯೋಜನೆ ಮಾಡಿಕೊಂಡಿದೆ.

ರೀಹಾಲ್ ಅವರು ಹೇಳುವಂತೆ, ಭಾರತದಲ್ಲಿ ಚಾಲಕರಹಿತ ವಾಹನಗಳ ನಿಯಮಾವಳಿ ಇಲ್ಲದಿರುವುದರಿಂದ ಮತ್ತು ಮಾರುಕಟ್ಟೆ ಸಿದ್ಧವಿಲ್ಲದಿರುವುದರಿಂದ, ಕಂಪನಿಯ ಗುರಿ ಸಂಪೂರ್ಣ ಸ್ವಾಯತ್ತ ವಾಹನವಲ್ಲ, ಚಾಲಕರ ಸಹಾಯವನ್ನು ಹೆಚ್ಚಿಸುವುದಾಗಿದೆ.

ಸ್ವಾಯತ್ತ ರೋಬೋಟ್ಸ್‌ನ  ಸಂಸ್ಥಾಪಕ ಸಂಜೀವ್ ಶರ್ಮಾ, ಭಾರತದ ಸಂಚಾರ ಸ್ಥಿತಿಯನ್ನು ಗಮನಿಸಿ, ಸ್ವಯಂಚಾಲಿತ ಕಾರುಗಳಿಗೆ ಭಾರತದ ರಸ್ತೆ ಸವಾಲಾಗಿವೆ ಎಂದು ಹೇಳಿದರು. ಅಗ್ಗದ ಚಾಲಕರ ಸಹಜ ಪ್ರವೇಶವೂ ಇದಕ್ಕೆ ಕಾರಣ. ಆದಾಗ್ಯೂ, ಈ ಸವಾಲುಗಳು ಭಾರತವನ್ನು ಉತ್ತಮ ಪರೀಕ್ಷಾ ಮೈದಾನವನ್ನಾಗಿ ಮಾಡಿ, ಶಕ್ತಿಶಾಲಿ ಚಾಲನಾ ಮಾದರಿಗಳನ್ನು ನಿರ್ಮಿಸಲು ಸಹಾಯಕವಾಗುತ್ತದೆ ಎಂದು ಅವರು ಹೇಳಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page