back to top
21.1 C
Bengaluru
Monday, October 27, 2025
HomeKarnatakaBengaluru UrbanWeekend Curfew ಗೆ ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Weekend Curfew ಗೆ ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

- Advertisement -
- Advertisement -

Bengaluru : ಭಾನುವಾರ ವಾರಾಂತ್ಯ ಕರ್ಫ್ಯೂ (Weekend Curfew) ಜಾರಿ ಇದ್ದರೂ ಬೆಂಗಳೂರು ನಗರದ (Bengaluru City) ಬಹುತೇಕ ಕಡೆಗಳಲ್ಲಿ ರಸ್ತೆಗಳಲ್ಲಿ ವಾಹನಗಳು ಓಡಾಡುತ್ತಿದ್ದ ದೃಶ್ಯ ಸಾಮನ್ಯವಾಗಿತ್ತು. ಮುಖ್ಯ ರಸ್ತೆಯ ಮೂಲಕ ಸಾಗಿದರೆ ಪೊಲೀಸರು ತಡೆಯಬಹುದೆಂಬುದನ್ನು ಅರಿತಿದ್ದ ಬೆಂಗಳೂರಿಗರು ಒಳ ಮಾರ್ಗಗಳ ಮೂಲಕ ವಾಹನಗಳಲ್ಲಿ ಓಡಾಡುತ್ತಿದ್ದರು. ಬಹುತೇಕ ಕಡೆ ಮೈದಾನಗಳಲ್ಲಿ ಯುವಕರು ಹಾಗೂ ಮಕ್ಕಳಿಂದ ಧರಿಸದೆಯೇ ಆಟ ಆಡುತ್ತಿದ್ದ ದೃಶ್ಯಗಳೂ ಕಂಡುಬಂದವು. ಭಾನುವಾರವಾಗಿದ್ದರಿಂದ ಬಹುತೇಕ ಮಾಂಸದ ಅಂಗಡಿಗಳಲ್ಲಿ ಮಾಂಸ, ಮೀನು ಖರೀದಿಗೆ ಜನ ಮುಗಿ ಬಿದ್ದಿದ್ದರು.ಕೆಲವೆಡೆ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳೂ, ಔಷಧ, ದಿನಸಿ, ತರಕಾರಿ ಅಂಗಡಿಗಳು ತೆರೆದಿದ್ದವು.

ಮೆಜೆಸ್ಟಿಕ್‌ (Majestic) ಹಾಗೂ KSRTC ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿದ್ದರಿಂದ ಕೆಲ ಬಸ್ಸುಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಪೊಲೀಸರು ವಾರಾಂತ್ಯ ಕರ್ಫ್ಯೂ ಅವಧಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ರಸ್ತೆಯಲ್ಲಿ ಓಡಾಡುತ್ತಿದ್ದ ಒಟ್ಟು 944 ವಾಹನಗಳನ್ನು ಜಪ್ತಿ ಮಾಡಿದ್ದಾರೆ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page