back to top
26.3 C
Bengaluru
Friday, July 18, 2025
HomeNewsBharat Gen: ಭಾರತದ ಮೊದಲ ಸ್ವಂತ Multimodal AI ಮಾದರಿ

Bharat Gen: ಭಾರತದ ಮೊದಲ ಸ್ವಂತ Multimodal AI ಮಾದರಿ

- Advertisement -
- Advertisement -

New Delhi: ಭಾರತದಲ್ಲಿ ಸಂಪೂರ್ಣವಾಗಿ ತಯಾರಾದ ಮೊದಲ ಮಲ್ಟಿಮೋಡಲ್ ಲಾರ್ಜ್ ಲ್ಯಾಂಗ್ವೇಜ್ ಮಾಡಲ್ (LLM-multimodal Large Language Model) ‘ಭಾರತ್ ಜೆನ್’ ಅನ್ನು ನಿನ್ನೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಬಿಡುಗಡೆ ಮಾಡಿದ್ದಾರೆ. ಇದು ಚ್ಯಾಟ್‌ಜಿಪಿಟಿ ಮಾದರಿಯಂತೆ ಕೆಲಸ ಮಾಡುತ್ತದೆ ಆದರೆ ಭಾರತದಲ್ಲೇ ಸ್ವತಂತ್ರವಾಗಿ ಅಭಿವೃದ್ಧಿಪಡಿಸಲಾಗಿದೆ.

ಸರ್ವಮ್ ಎಐ ಮತ್ತು ಭಾರತ್ ಜೆನ್ ನಡುವಿನ ವ್ಯತ್ಯಾಸ: ಕಳೆದ ತಿಂಗಳು ಬಿಡುಗಡೆ ಆಗಿದ್ದ ಸರ್ವಮ್ ಎಐ ಯೂರೋಪಿನಲ್ಲಿ ಅಭಿವೃದ್ಧಿಪಡಿಸಿದ ಓಪನ್ ಸೋರ್ಸ್ ಮಾದರಿಯನ್ನು ಬಳಸಿಕೊಂಡು ತಯಾರಾದದ್ದು. ಆದರೆ ಭಾರತ್ ಜೆನ್ ಸಂಪೂರ್ಣವಾಗಿ ಭಾರತದಲ್ಲೇ ತಯಾರಾಗಿದ್ದು, ಭಾರತೀಯ ಭಾಷೆಗಳಿಗೂ ಹೆಚ್ಚು ಒತ್ತು ನೀಡಿದೆ.

ಭಾರತ್ ಜೆನ್ ವಿಶೇಷತೆಗಳು

  • ಕನ್ನಡ ಸೇರಿದಂತೆ ಹಲವಾರು ಭಾರತೀಯ ಭಾಷೆಗಳನ್ನು ಚೆನ್ನಾಗಿ ಹತ್ತಿರದಿಂದ ಬಳಸಿಕೊಂಡು ತರಬೇತಿ ಪಡೆದಿದೆ.
  • ಭಾರತೀಯ ಸಂಸ್ಕೃತಿ ಮತ್ತು ಭಾಷೆಗಳ ಅಂಶಗಳನ್ನು ಒಳಗೊಂಡಿದೆ.
  • ಕೃಷಿ, ಶಿಕ್ಷಣ, ಆರೋಗ್ಯ, ವ್ಯಾಪಾರ ಮುಂತಾದ ಕ್ಷೇತ್ರಗಳಲ್ಲಿ ಜನರಿಗೆ ಸಹಾಯ ಮಾಡಬಲ್ಲದು.

ಈ ಸಮಯದಲ್ಲಿ ಭಾರತ್ ಜೆನ್ ಇನ್ನೂ ಅಭಿವೃದ್ಧಿ ಹಂತದಲ್ಲಿದ್ದು, ಸಾಮಾನ್ಯರಿಗೆ ಲಭ್ಯವಿಲ್ಲ. ಆದಾಗ್ಯೂ, ಇದು ಭಾರತದಲ್ಲಿ ಸ್ವತಂತ್ರ ಎಐ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿದ್ದು, ಭಾರತೀಯ ಭಾಷೆಗಳ AI ಸೇವೆಯನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page