Bidadi, Ramanagara : ಶಾಸಕರಾಗಿ ನಾಲ್ಕು ವರ್ಷದ ಅವಧಿಯಲ್ಲಿ ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ ಮಾಡಿರುವ ಸಾಧನೆಗಳ ‘ಬಿಡದಿ ಸಾಧನೆಯ ಹಾದಿಯಲ್ಲಿ’ (Bidadi Sadhaneya Hadiyalli) ಎಂಬ ಕಿರು ಪುಸ್ತಕವನ್ನು ಶಾಸಕ ಮಂಜುನಾಥ್ (MLA Manjunath) ಬುಧವಾರ ಬಿಡುಗಡೆ ಮಾಡಿದರು.
ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಶಾಸಕರು “ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ಬಿಡದಿ ಮತ್ತು ಮಾಗಡಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಯೋಜನೆ ಮಂಜೂರು ಮಾಡಲಾಗಿದ್ದು ಬಿಡದಿ ಪುರಸಭೆ ವ್ಯಾಪ್ತಿಗೆ ಮಂಚನಬೆಲೆ ಜಲಾಶಯದಿಂದ ಕುಡಿಯುವ ನೀರು ಸರಬರಾಜಿಗೆ ₹73.40 ಕೋಟಿ ಮತ್ತು ಒಳಚರಂಡಿ ಯೋಜನೆಗೆ ₹98.20 ಕೋಟಿ ಮಂಜೂರು ಮಾಡಲಾಗಿದೆ. ಬಿಡದಿಯಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ, ಆಮ್ಲಜನಕ ಘಟಕಗಳಿಗೆ ಚಾಲನೆ ನೀಡಿದ್ದೇನೆ. ಶಾಸಕನಾಗಿ ನಾಲ್ಕು ವರ್ಷದ ಅವಧಿಯಲ್ಲಿ ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ ಮಾಡಿರುವ ಸಾಧನೆಗಳ ಪಟ್ಟಿಯನ್ನು ಮತದಾರಿಗೆ ನೀಡಿದ್ದೇನೆ. ಮಾಜಿ ಶಾಸಕರಾದ್ದ ಎಚ್.ಸಿ. ಬಾಲಕೃಷ್ಣ ತಮ್ಮ10 ವರ್ಷ ಸಾಧನೆಯ ಪಟ್ಟಿಯನ್ನು ಬಿಡುಗಡೆ ಮಾಡಲಿ. ಕಾಂಗ್ರೆಸ್‌ನಿಂದ ಈ ಭಾಗಕ್ಕೆ ಸಂಸದರು, ಎಂಎಲ್‌ಸಿ ಇದ್ದರೂ ಅವರ ಕೊಡುಗೆ ಏನೆಂದು ತಿಳಿಸಲಿ” ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಎಚ್.ಎಲ್.ಚಂದ್ರು, ಮುಖಂಡರಾದ ಶೇಷಪ್ಪ, ಸೊಮೇಗೌಡ, ಲಕ್ಷ್ಮಿ ಮಂಜುನಾಥ್, ಹುಚ್ಚಮ್ಮನದೊಡ್ಡಿ ಲೊಕೇಶ್ ಹಾಗೂ ಅಭ್ಯರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.