Bidar : ಬೀದರ್ ಜಿಲ್ಲೆಯಾದ್ಯಂತ ವಿವಿಧೆಡೆ ಬುಧವಾರ ಚನ್ನಬಸವ ಪಟ್ಟದ್ದೇವರ (Sri Channabasava Pattadevaru) ಅವರ 132ನೇ ಜಯಂತಿ ಆಚರಿಸಲಾಯಿತು. ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರ ರಂಗ ಮಂದಿರದ ಆವರಣದಲ್ಲಿ ಲಾಡಗೇರಿ ಹಿರೇಮಠದ ಗಂಗಾಧರ ಶಿವಾಚಾರ್ಯರು ಸಾನ್ನಿಧ್ಯದಲ್ಲಿ ಚನ್ನಬಸವ ಪಟ್ಟದ್ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆ ಸ್ಮರಿಸಿದರು.
ಶರಣರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನುಡಿದಂತೆ ನಡೆದಿರುವ ಚನ್ನಬಸವ ಪಟ್ಟದ್ದೇವರು ನಮ್ಮ ನಾಡು ಕಂಡ ಶ್ರೇಷ್ಠ ಸಂತರಾಗಿದ್ದಾರೆ ಎಂದು ರಾಜ್ಯ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಹೇಳಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ, ಹಿರಿಯ ವಕೀಲ ಜೈರಾಜ್ ಬುಕ್ಕಾ, ಸಾಹಿತಿಗಳಾದ ಎಸ್.ಬಿ. ಕುಚಬಾಳ, ಪ್ರಶಾಂತ ಹೊಳಸಮುದ್ರ, ಸಿದ್ದು ಫುಲಾರೆ, ಶಿವಶರಣಪ್ಪ ಗಣೇಶಪೂರ, ಶ್ರೀಕಾಂತ ಪಾಟೀಲ, ರವೀಂದ್ರ ರಾಠೋಡ, ಕಂಟೆಪ್ಪ ಪಾಟೀಲ ಹಳದಕೇರಿ, ಕನ್ನಡ ಸಂಸ್ಕೃತಿ ಇಲಾಖೆಯ ತಾಂತ್ರಿಕ ಸಹಾಯಕ ರಾಜಶೇಖರ ವಟಗೆ ಹಾಗೂ ರವಿ ನೇಳಗೆ ಉಪಸ್ಥಿತರಿದ್ದರು.