ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರ ಥಾರ್ (Mahindra Thar) ಅನ್ನು ಬಹುಮಾನಿತ SUVಯಾಗಿ ಪರಿಗಣಿಸಲಾಗುತ್ತಿದೆ, ಇದಕ್ಕೆ ದೊಡ್ಡ ಕ್ರೇಜ್ ಇದೆ. ಈ ಕಾರನ್ನು ಖರೀದಿಸಲು ಜನ ಸಾಲುಗಟ್ಟಿ ನಿಂತಿದ್ದಾರೆ. ನೀವು ಮಹೀಂದ್ರ ಥಾರ್ ಖರೀದಿಸಲು ಯೋಚಿಸುತ್ತಿದ್ದರೆ, ಈ ಸಮಯವು ನೀವು ಕಾಯುತ್ತಿರುವ ಅವಕಾಶವಾಗಿದ್ದು, ಕಂಪನಿಯು 3 ಲಕ್ಷ ರೂ. ಗಿಂತ ಹೆಚ್ಚಿನ ಡಿಸ್ಕೌಂಟ್ ನೀಡುತ್ತಿದೆ.
ಮಹೀಂದ್ರ ಥಾರ್ 3-ಡೋರ್ ಮಾದರಿಯ ಮೇಲೆ ಭಾರೀ ಡಿಸ್ಕೌಂಟ್ ನೀಡಲಾಗುತ್ತಿದೆ. ವಿಶೇಷವಾಗಿ 3-ಡೋರ್ 2WD ರೂಪಾಂತರಗಳ ಮೇಲೆ ಗ್ರಾಹಕರು ರಿಯಾಯಿತಿಗಳನ್ನು ಪಡೆಯಬಹುದು. ಥಾರ್ RWD 1.5 ಲೀಟರ್ ಡೀಸೆಲ್ ರೂಪಾಂತರವು 56 ಸಾವಿರ ರೂ. ರಿಯಾಯಿತಿಯೊಂದಿಗೆ ಲಭ್ಯವಿದೆ.
ಪೆಟ್ರೋಲ್ ಎಂಜಿನ್ ಆಪ್ಷನ್‌ಗಳಲ್ಲಿ ರಿಯರ್ ವ್ಹೀಲ್ ಡ್ರೈವ್ ಮಾದರಿಗಳಿಗೆ 1 ಲಕ್ಷ 31 ಸಾವಿರ ರೂ. ರಿಯಾಯಿತಿ ಲಭ್ಯವಿದೆ. LX ಟ್ರಿಪ್ ರೂಪಾಂತರಗಳಲ್ಲಿ 3 ಲಕ್ಷಕ್ಕಿಂತ ಹೆಚ್ಚು ರಿಯಾಯಿತಿ ಪಡೆಯಬಹುದು.
ಮಹೀಂದ್ರಾ ತನ್ನ ಉತ್ಪನ್ನಗಳ ಬೆಲೆ 2025 ರಿಂದ 3%ಷ್ಟು ಹೆಚ್ಚಿಸಲು ಯೋಜಿಸುತ್ತಿದೆ. ಹಣದುಬ್ಬರ ಹಾಗೂ ಇತರ ಕಾರಣಗಳಿಂದ ಬೆಲೆ ಏರಿಕೆಯಾಗಲಿದೆ ಎಂದು ಕಂಪನಿಯು ಹೇಳಿದೆ. XEV 7e, BE.07, BE.09 ಹಾಗೂ XUV 400 ಮಾದರಿಗಳನ್ನು ಬಿಡುಗಡೆ ಮಾಡಲು ತಯಾರಿ ಮಾಡುತ್ತಿದ್ದಾರೆ.
ಮಹೀಂದ್ರ ಥಾರ್ ಡೀಸೆಲ್ ಎಂಜಿನ್ 2184 cc ಹಾಗೂ 1497 cc ಮತ್ತು ಪೆಟ್ರೋಲ್ ಎಂಜಿನ್ 1997 cc ಆಗಿವೆ. ಇದು ಆಟೋಮೆಟಿಕ್ ಹಾಗೂ ಮಾನ್ಯುವಲ್ ಟ್ರಾನ್ಸ್ ಮಿಷನ್ನೊಂದಿಗೆ ಲಭ್ಯವಿದೆ. ವೆರಿಯಂಟ್ ಮತ್ತು ಫ್ಯೂಯಿಲ್ ಪ್ರಕಾರವನ್ನು ಅವಲಂಬಿಸಿ, ಥಾರ್ ಮೈಲೇಜ್ 15.2 ಕಿಮೀ/ಲೀಟರ್ ಆಗಿದೆ. ಥಾರ್ 4 ಆಸನಗಳು ಮತ್ತು ಉದ್ದ 3985 ಮಿ.ಮೀ., ಅಗಲ 1820 ಎಂ.ಎಂ. ಹಾಗೂ ವೀಲ್ ಬೇಸ್ 2450 ಮಿ.ಮೀ. ಹೊಂದಿದೆ.