Bihar : ಜೀವಿಕಾ ದಿದಿಗಳಿಗೆ ₹30,000 ವೇತನ ಮತ್ತು ಸರ್ಕಾರಿ ಉದ್ಯೋಗ ನೀಡುವುದಾಗಿ RJD ನಾಯಕ ತೇಜಸ್ವಿ ಯಾದವ್ ಘೋಷಿಸಿದ್ದಾರೆ.
ಅವರ ಮಾತಿನ ಪ್ರಕಾರ, ಮಹಿಳೆಯರು ಅನೇಕ ಶೋಷಣೆಗೆ ಒಳಗಾಗುತ್ತಿದ್ದಾರೆ. ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ಪರಿಶೀಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. “ನಾವು ಮಾಡುತ್ತಿದ್ದ ಎಲ್ಲ ವಾಗ್ದಾನಗಳನ್ನು ಖಂಡಿತವಾಗಿಯೇ ಪೂರೈಸುತ್ತೇವೆ,” ಎಂದು ಅವರು ತಿಳಿಸಿದ್ದಾರೆ.
ಇನ್ನು ಜೀವಿಕಾ ದಿದಿಗಳು ತೆಗೆದುಕೊಂಡ ಸಾಲದ ಬಡ್ಡಿಯನ್ನು 2 ವರ್ಷಗಳ ಕಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಅವಧಿಯಲ್ಲಿ ಪೂರಕ ₹2,000 ಭತ್ಯೆ ಮತ್ತು ₹5 ಲಕ್ಷಗಳ ವಿಮೆ ಸೌಲಭ್ಯ ದೊರಯಲಿದೆ.
ಈ ಹಿಂದೆ ಅಧಿಕಾರದಲ್ಲಿರುವ ಡಬಲ್ ಎಂಜಿನ್ ಸರ್ಕಾರ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದು, ಅಭಿವೃದ್ಧಿಗೆ ಪೂರಾವಾಗಿಲ್ಲ ಎನ್ನುವ ಆರೋಪವನ್ನು ಮಾಡಿದ್ದಾರೆ ತೇಜಸ್ವಿ ಯಾದವ್. “ಜನರ ದುಡಿಮೆ, ಬೇರೆ ರಾಜ್ಯಗಳಿಗೆ ವಲಸೆ, ದುಬಾರಿ ಜೀವನ, ಕೆಲಸದ ಕೊರತೆ ಮೊದಲಾದ ಸಮಸ್ಯೆಗಳು ಹೆಚ್ಚಗಿದೆ. ಜನರೊಂದಿಗೆ ನೇರ ಸಂವಾದ ನಡೆಸುವ ಸಮಯ ಬಂದಿದೆ,” ಎಂದರು.
RJD ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಈ ಬಾರಿ 143 ಜನರನ್ನು ಕಣಕ್ಕಿಳಿಸಿದೆ. ಈ ಪಟ್ಟಿಯಲ್ಲಿ 24 ಮಹಿಳಾ ಅಭ್ಯರ್ಥಿಗಳಿಗೂ ಅವಕಾಶ ದೊರೆತಿದೆ.
ಚುನಾವಣೆ ಪ್ರಚಾರದಲ್ಲಿ BETI ಮತ್ತು MAA ಎಂಬ ಹೊಸ ಸರಳ ಯೋಜನೆಗಳನ್ನೂ ಪ್ರಕಟಿಸಲಾಗಿದೆ. ಇದರಲ್ಲಿ MAA ಯೋಜನೆ ಮನೆ, ಆಹಾರ ಮತ್ತು ಆದಾಯದ ಭದ್ರತಿಗೆ ಒತ್ತು ನೀಡುತ್ತದೆ.







