Patna: ಬಿಹಾರದಲ್ಲಿ ಭೀಕರ ಪ್ರವಾಹ (Bihar floods) ಉಂಟಾಗಿ 13 ಲಕ್ಷಕ್ಕೂ ಹೆಚ್ಚು ಮಂದಿ ಸಂಕಷ್ಟ ಅನುಭವಿಸುತ್ತಿದ್ದು, ಇದುವರೆಗೆ 26 ಜನರು ಸಾವನ್ನಪ್ಪಿದ್ದಾರೆ.
ನೇಪಾಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಿಹಾರದ ನದಿಗಳ ನೀರಿನ ಮಟ್ಟ ಹೆಚ್ಚಾಗಿದೆ. ತಗ್ಗು ಪ್ರದೇಶದ ಜನರು ಮನೆ ಬಿಟ್ಟು ಎತ್ತರದ ಪ್ರದೇಶಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಸಾವು-ನೋವುಗಳ ವಿವರ
ಬೇಗುಸರೈ: 8 ಸಾವು
- ಭಾಗಲ್ಪುರ್, ಸಿವಾನ್, ಭೋಜ್ಪುರ್, ಖಗಾರಿಯಾ: ತಲಾ 2 ಸಾವು
- ಮುಂಗೇರ್, ವೈಶಾಲಿ, ಕತಿಹಾರ್: ತಲಾ 1 ಸಾವು
- ಬೇಗುಸರೈಯಲ್ಲಿ ತಾಯಿ-ಮಗಳು ಸೇರಿ 8 ಮಂದಿ ಪ್ರವಾಹದಲ್ಲಿ ಸಿಲುಕಿ ಸಾವನ್ನಪ್ಪಿದರು.
- ಭಾಗಲ್ಪುರ್‌ನಲ್ಲಿ 26 ವರ್ಷದ ವಂದನಾ ದೇವಿ ಮತ್ತು 7 ವರ್ಷದ ಮಗಳು ಅನನ್ಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು.
- ರೈತ ಧೀರಜ್ ಕುಮಾರ್ ಸಿಂಗ್ (32) ಪ್ರವಾಹಕ್ಕೆ ಕೊಚ್ಚಿ ಹೋಗಿ ಮೃತರು.
- ಪೂರ್ವ ಚಂಪಾರಣ್ನಲ್ಲಿ ಗೌತಮ್ ಕುಮಾರ್ (21) ಸ್ನಾನ ಮಾಡುವಾಗ ಮುಳುಗಿ ಸಾವನ್ನಪ್ಪಿದರು.
- ಬೇಗುಸರೈ ಆಸ್ಪತ್ರೆ ಆವರಣದಲ್ಲಿ 2 ವರ್ಷದ ಬಾಲಕಿ ಪ್ರವಾಹದಲ್ಲಿ ಮುಳುಗಿ ಸಾವನ್ನಪ್ಪಿದಳು.
ಭಾಗಲ್ಪುರ್ ಜಿಲ್ಲೆಯ ಗಂಭೀರ ಸ್ಥಿತಿ: ಭಾಗಲ್ಪುರ್‌ನಲ್ಲಿ ಗಂಗಾ ನದಿಯ ನೀರಿನ ಮಟ್ಟ ಅಪಾಯ ಮಟ್ಟಕ್ಕಿಂತ 80 ಸೆಂ.ಮೀ. ಹೆಚ್ಚಾಗಿದೆ. ತಿಲ್ಕಾ ಮಾಂಝಿ ವಿಶ್ವವಿದ್ಯಾಲಯಕ್ಕೂ ಪ್ರವಾಹದ ನೀರು ನುಗ್ಗಿದೆ.
“ಪ್ರತಿ ವರ್ಷ ಪ್ರವಾಹ ಸಮಸ್ಯೆ ಎದುರಿಸುತ್ತೇವೆ. ದೋಣಿಯ ಮೂಲಕ ವಿಶ್ವವಿದ್ಯಾಲಯಕ್ಕೆ ಹೋಗಬೇಕಾದ ಪರಿಸ್ಥಿತಿ. ಸರ್ಕಾರ ಶಾಶ್ವತ ಪರಿಹಾರ ಕಂಡುಹಿಡಿಯಬೇಕು” ಎಂದು ಸಿಬ್ಬಂದಿ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.