Bengaluru: ರಾಹುಲ್ ಗಾಂಧಿ ನೇತೃತ್ವದಲ್ಲಿ ಆಗಸ್ಟ್ 5 ರಂದು ಫ್ರೀಡಂ ಪಾರ್ಕ್‌ನಲ್ಲಿ (Freedom Park) ನಡೆಯಬೇಕಿದ್ದ ಕಾಂಗ್ರೆಸ್ ಪಕ್ಷದ ಮತದಾನ ಕುರಿತ ಪ್ರತಿಭಟನೆಯನ್ನು ಶಿಬು ಸೊರೇನ್ ನಿಧನದ ಹಿನ್ನೆಲೆಯಲ್ಲಿ ಆಗಸ್ಟ್ 8ಕ್ಕೆ ಮುಂದೂಡಲಾಗಿದೆ.
ಆದರೆ, ಈ ಸಮಾವೇಶದ ಪೂರ್ವಭಾವಿಯಾಗಿ ಫ್ರೀಡಂ ಪಾರ್ಕ್‌ನಲ್ಲಿದ್ದ ಒಂದು ಹಳೆಯ ತಡೆಗೋಡೆಯನ್ನು ಕೆಡವಲಾಗಿದೆ ಮತ್ತು ಹಲವಾರು ಮರಗಳನ್ನು ಕಡಿಯಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತು ಉಪ್ಪಾರಪೇಟೆ ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ.
- ಕಾಂಗ್ರೆಸ್ ಪಾರ್ಟಿ ತಮ್ಮ ರಾಜಕೀಯ ಕಾರ್ಯಕ್ರಮದ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಯೇ ಆದ ತಡೆಗೋಡೆ ಕೆಡವಿ, ಜನರಿಗೆ ತೊಂದರೆಂಟು ಮಾಡಿದ್ದಾರೆ.
- ಯಾವುದೇ ಸರ್ಕಾರದ ಅನುಮತಿ ಇಲ್ಲದೆ ಈ ಕೆಡವಿಕೆಯ ಕೆಲಸ ಮಾಡಿದ್ದಾರೆ.
- ಸರ್ಕಾರದ ಅಧಿಕಾರ ದುರುಪಯೋಗವಾಗಿದೆ ಎಂದು ಆರೋಪಿಸಿದ್ದಾರೆ.
- ಸಾರ್ವಜನಿಕ ಆಸ್ತಿಗೆ ಹಾನಿ, ಪರಿಸರ ನಾಶ ಹಾಗೂ ಸರ್ಕಾರದ ಹಣಕ್ಕೆ ನಷ್ಟ ಉಂಟುಮಾಡಲಾಗಿದೆ.
ಬಿಜೆಪಿಯ ಬೇಡಿಕೆ
- ಈ ಕಾರ್ಯಕ್ಕೆ ಕಾರಣರಾಗಿರುವ ಆಯೋಜಕರು ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
- ಸಾರ್ವಜನಿಕರಿಗೆ ನ್ಯಾಯ ದೊರಕಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಕಾಂಗ್ರೆಸ್ ಆಯೋಜಿಸುತ್ತಿರುವ ಸಮಾವೇಶಕ್ಕೆ ತಯಾರಿ ಎಂಬ ಹೆಸರಿನಲ್ಲಿ ಸಾರ್ವಜನಿಕ ಆಸ್ತಿ ಹಾನಿಯಾಗಿದ್ದು, ಈ ಕುರಿತು ಬಿಜೆಪಿ ಕಠಿಣ ಆಕ್ಷೇಪ ವ್ಯಕ್ತಪಡಿಸಿದೆ ಮತ್ತು ಸೂಕ್ತ ಕ್ರಮಕ್ಕೆ ಒತ್ತಾಯಿಸಿದೆ.