Delhi: ಪಾಕಿಸ್ತಾನದಲ್ಲಿ (Pakistan Govt) ಭದ್ರತಾ ವ್ಯವಸ್ಥೆ ಕೈತಪ್ಪಿದ್ದು, ಗಂಭೀರ ಪರಿಸ್ಥಿತಿ ಉಂಟಾಗಿದೆ. ದಿನದಿಂದ ದಿನಕ್ಕೆ ಅಸ್ಥಿರತೆ ಹೆಚ್ಚಾಗುತ್ತಿದ್ದು, ದಂಗೆಕೋರರ (Attacks in Pakistan) ಸತತ ದಾಳಿಗಳಿಂದ ಭದ್ರತೆಯ ಸ್ಥಿತಿ ಚಿಂತಾಜನಕವಾಗಿದೆ.
ಮಾಹಿತಿಯ ಪ್ರಕಾರ, ಕಳೆದ 48 ಗಂಟೆಗಳಲ್ಲಿ ಪಾಕಿಸ್ತಾನದಲ್ಲಿ ಬರೋಬ್ಬರಿ 57 ದಾಳಿಗಳು ನಡೆದಿವೆ. ಇದರಲ್ಲಿ ಬಲೂಚಿಸ್ತಾನದಲ್ಲಿ ನಡೆದ ರೈಲು ಅಪಹರಣ ಘಟನೆಯೂ ಸೇರಿಲ್ಲ. ಈ ದಾಳಿಗಳ ಪೈಕಿ ಹೆಚ್ಚಿನವು ಟಿಟಿಪಿ ಮತ್ತು ಬಿಎಲ್ಎ ಸಂಘಟನೆಗಳಿಂದ ನಡೆದಿವೆ ಎಂದು ವರದಿಯಾಗಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ಈ ದಾಳಿಗಳಲ್ಲಿ 16 ಜನರು ಸಾವನ್ನಪ್ಪಿದ್ದು, 46 ಜನರು ಗಾಯಗೊಂಡಿದ್ದಾರೆ. ಆದರೆ ಬಿಎಲ್‌ಎ ಹೇಳಿಕೆಯ ಪ್ರಕಾರ ಗಾಯಗೊಂಡವರ ಸಂಖ್ಯೆ 100 ಕ್ಕೂ ಹೆಚ್ಚು ಎಂದು ವರದಿಗಳು ತಿಳಿಸಿವೆ.
ಪಾಕಿಸ್ತಾನದ ಭದ್ರತಾ ಪರಿಸ್ಥಿತಿ ಹದಗೆಡುತ್ತಿದ್ದಂತೆ, ಇದರ ಪರಿಣಾಮ ನೆರೆ ದೇಶಗಳಿಗೂ ಬೀರುವ ಸಾಧ್ಯತೆ ಹೆಚ್ಚಿದೆ.