Search
WhatsApp alerts

Home › Business

BMTC 4500 ಹೊಸ ಬಸ್ಸು: ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್

administrator · Published

BMTC 4500 new buses

Bengaluru: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಎಂಟಿಸಿ (BMTC) ಬಸ್ಸುಗಳ ಅಪಘಾತಗಳು ಹೆಚ್ಚಾಗುತ್ತಿವೆ. ಅದರ ಮುಖ್ಯ ಕಾರಣ ಹಳೆಯ ಡಕೋಟಾ ಬಸ್ಸುಗಳು ಎಂದು ಹೇಳಲಾಗುತ್ತಿದೆ. ಕಳೆದ ವರ್ಷದಲ್ಲಿ ಬಸ್ಸು ಅಪಘಾತಗಳಲ್ಲಿ 44 ಜನ ಮೃತಪಟ್ಟಿದ್ದು, ಕಳೆದ ತಿಂಗಳಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಕೆಲವು ಬಸ್ಸುಗಳಲ್ಲಿ ಹಾರ್ನ್, ಎಂಜಿನ್, ಗೇರ್ ಬಾಕ್ಸ್, ಬ್ರೇಕ್, ಕ್ಲಚ್ ಪ್ಯಾಡ್ ಮುಂತಾದ ಸಮಸ್ಯೆಗಳಿವೆ. ಜನರು ಹೇಳುವಂತೆ, ಹೊಸ ಬಸ್ಸುಗಳು ಬರುವಂತಾಗಿ  ಅಪಘಾತಗಳು ಕಡಿಮೆಯಾಗಬಹುದು.

ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ 4500 ಹೊಸ ಬಸ್ಸುಗಳನ್ನು ಬಿಎಂಟಿಸಿಗೆ ನೀಡಲು ಗ್ರೀನ್ ಸಿಗ್ನಲ್ ನೀಡಿದೆ. ಈ ಹೊಸ ಬಸ್ಸುಗಳು ಈ ವರ್ಷದ ಕೊನೆ ಅಥವಾ ಮುಂದಿನ ವರ್ಷ ಆರಂಭದಲ್ಲಿ ಹಂತ ಹಂತವಾಗಿ ಬಿಎಂಟಿಸಿಗೆ ಸೇರುತ್ತವೆ. ಹಳೆಯ ಬಸ್ಸುಗಳು ನಂತರ ಗುಜರಿ ಸೇರ್ಪಡೆ ಮಾಡಲಾಗುತ್ತದೆ.

  • ಹೊಸ ಬಸ್ಸುಗಳ ವಿವರ
  • 4100 ಸಾಮಾನ್ಯ ಎಲೆಕ್ಟ್ರಿಕ್ ಬಸ್ಸು
  • 400 ಎಸಿ ಎಲೆಕ್ಟ್ರಿಕ್ ಬಸ್ಸು

ಈ ಬಸ್ಸುಗಳಿಗೆ ನಿಗಮದ 15–20 ಡಿಪೋಗಳಲ್ಲಿ ಚಾರ್ಜಿಂಗ್ ಸ್ಟೇಷನ್ಗಳನ್ನು ಸಿದ್ಧಪಡಿಸಲಾಗಿದೆ. ಸದ್ಯದಲ್ಲಿ ಬಿಎಂಟಿಸಿಯಲ್ಲಿ 1200 ಎಲೆಕ್ಟ್ರಿಕ್ ಬಸ್ಸುಗಳಿವೆ. 4500 ಹೊಸ ಬಸ್ಸುಗಳ ಸೇರ್ಪಡೆ ನಂತರ ಒಟ್ಟು 5700 ಎಲೆಕ್ಟ್ರಿಕ್ ಬಸ್ಸುಗಳು ಕಾರ್ಯನಿರ್ವಹಿಸಲಿದೆ. ಬಸ್ಸುಗಳನ್ನು ಗ್ರಾಸ್ ಕಾಂಟ್ರಾಕ್ಟ್ ಅಡಿಯಲ್ಲಿ ಚಾಲನೆ ಮಾಡಲಾಗುತ್ತದೆ; ಡ್ರೈವರ್ ಬಸ್ ಕಂಪನಿಗಳಿಂದ ಬಂದರೆ, ಕಂಡಕ್ಟರ್ ಬಿಎಂಟಿಸಿಯಿಂದ ಇರುತ್ತಾರೆ.

ಒಟ್ಟಿನಲ್ಲಿ, ಪದೇಪದೇ ಬಸ್ ಬ್ರೇಕ್ ಡೌನ್ ಮತ್ತು ಅಪಘಾತಗಳಿಂದ ತೊಂದರೆ ಅನುಭವಿಸುತ್ತಿದ್ದ ಬೆಂಗಳೂರಿನ ಜನರಿಗೆ ಕೇಂದ್ರ ಸರ್ಕಾರದ ಈ ನಿರ್ಣಯವು ಉತ್ತಮ ಸುದ್ದಿಯಾಗಿದೆ. ಹೊಸ ಬಸ್ಸುಗಳು ಬೇಗ ಬಿಎಂಟಿಸಿಗೆ ಸೇರುತ್ತವೆ ಎಂದು ನಿರೀಕ್ಷಿಸಲಾಗಿದೆ, ಇದರಿಂದ ಜನರ ಜೀವ ಉಳಿಯಲು ಸಹಾಯವಾಗಲಿದೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page