Bengaluru: BMTC ನೌಕರರಿಗೆ ವೇತನ ಬಿಡುಗಡೆ ಮಾಡದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆದೇಶ ನೀಡಿದ್ದರೂ, ಮಾರ್ಚ್ 3ರವರೆಗೂ ವೇತನ ನೀಡದಿರುವುದರಿಂದ ನೌಕರರು ಅಸಮಾಧಾನಗೊಂಡಿದ್ದಾರೆ.
ಫೆಬ್ರವರಿ 2ನೇ ವಾರದಲ್ಲಿ ಸಾರಿಗೆ ಸಚಿವರು ಮಾರ್ಚ್ 1ನೇ ತಾರೀಖಿನಂದೇ ವೇತನ ನೀಡಬೇಕೆಂದು ಆದೇಶಿಸಿದ್ದರು. ಆದರೆ, ಗಡುವು ಮುಗಿದರೂ ವೇತನ ಇನ್ನೂ ಬಿಡುಗಡೆಯಾಗಿಲ್ಲ.
ಹಿಂದಿನ ದಿನಗಳಲ್ಲಿ ಪ್ರತಿ ತಿಂಗಳ 7ನೇ ತಾರೀಖಿನಂದು ವೇತನ ನೀಡಲಾಗುತ್ತಿತ್ತು. ಇದರಿಂದ ನೌಕರರು ಬಾಡಿಗೆ, ಮಕ್ಕಳ ಶಿಕ್ಷಣ, ಇತರ ಖರ್ಚುಗಳಿಗೆ ತೊಂದರೆ ಅನುಭವಿಸುತ್ತಿದ್ದರು. ಹೀಗಾಗಿ, ಬದಲಾವಣೆಗೆ ಮನವಿ ಮಾಡಿದ ನೌಕರರಿಗೆ ಸಚಿವರು ಸ್ಪಂದಿಸಿದ್ದರು.
ಮಾರ್ಚ್ 1ರಿಂದಲೇ ನೌಕರರ ವೇತನ ಪಾವತಿಯಾಗಬೇಕು ಎಂಬ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, BMTC ಲೆಕ್ಕಪತ್ರ ಇಲಾಖೆ ಈ ಆದೇಶವನ್ನು ಪಾಲಿಸದಿರುವುದು ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.