back to top
25.2 C
Bengaluru
Friday, July 18, 2025
HomeKarnatakaBallariಕುಡಿದ ಮತ್ತಿನಲ್ಲಿ ಶಾಸಕರ ಕಚೇರಿಗೆ Bomb threat message

ಕುಡಿದ ಮತ್ತಿನಲ್ಲಿ ಶಾಸಕರ ಕಚೇರಿಗೆ Bomb threat message

- Advertisement -
- Advertisement -

Ballari: ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಅವರಿಗೆ ಬಾಂಬ್ ಬೆದರಿಕೆ ಸಂದೇಶವೊಂದು (Bomb threat message) ಬಂದಿದ್ದು, ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ಗಾಂಧಿನಗರ ಪೊಲೀಸರು, ಸಂದೇಶ ಕಳುಹಿಸಿದ್ದ ಸಂತೋಷ ಎಂಬ ಯುವಕನನ್ನು ವಶಕ್ಕೆ ಪಡೆದಿದ್ದಾರೆ.

ನಿನ್ನೆ (ಮಾ.18) ತಡರಾತ್ರಿ, ಕುಡಿದ ಮತ್ತಿನಲ್ಲಿ ಸಂತೋಷ, ಶಾಸಕರ ಕಚೇರಿಯಲ್ಲಿ ಬಾಂಬ್ ಇದೆ ಎಂದು ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿದ್ದ. ವಿಷಯ ತಿಳಿದ ಕೂಡಲೇ, ಶಾಸಕ ಭರತ್ ರೆಡ್ಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಸಂತೋಷನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಮದ್ಯದ ಅಮಲಿನಲ್ಲಿ ಈ ಕೃತ್ಯ ಮಾಡಿರುವುದು ದೃಢವಾಗಿದೆ. ಆದರೆ, ಈ ಸಂದೇಶ ಕಳುಹಿಸಲು ಖಾಸಗಿ ಕಾರಣವೇ ಅಥವಾ ಬೇರೆ ಏನಾದರೂ ಕಾರಣ ಇದೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page