Konanur, Hassan : ಪಡಿತರ ಚೀಟಿ ಹೊಂದಿರುವ ಅನರ್ಹ ಫಲಾನುಭವಿಗಳು ಅಹಾರ ಇಲಾಖೆಗೆ ತಮ್ಮ BPL Ration Card ಪಡಿತರ ಚೀಟಿಯನ್ನು ಹಿಂದಿರುಗಿಸದಿದ್ದಲ್ಲಿ ಪಡಿತರ ಚೀಟಿ ಪರಿಷ್ಕರಣೆಯ ಸಂಧರ್ಭ ಸರ್ಕಾರಿ ಸೌಲಭ್ಯಗಳ ದುರುಪಯೋಗದ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ರಾಮನಾಥಪುರ ಹೋಬಳಿಯ ಬಸವಾಪಟ್ಟಣ ಗ್ರಾಮಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಕೆ.ಎಂ. ಶ್ರೀನಿವಾಸ್ (Tahsildar K M Srinivas) ಎಚ್ಚರಿಕೆ ನೀಡಿದರು.
ಸಾರ್ವಜನಿಕರಲ್ಲಿ ಅಹವಾಲು ಸ್ವೀಕರಿಸಿ ಮಾತನಾಡಿದ ತಹಶೀಲ್ದಾರರು ” 3 Hectare ಗಿಂತ ಹೆಚ್ಚು ನೀರಾವರಿ ಭೂಮಿ ಹೊಂದಿರುವವರು, ತೆರಿಗೆ ಪಾವತಿದಾರರು, ಸರ್ಕಾರದಿಂದ ಅನುದಾನ, ವಾರ್ಷಿಕ ₹ 1.20 ಲಕ್ಷ ಆದಾಯ ಹೊಂದಿರುವವರು, ವೇತನ ಪಡೆಯುತ್ತಿರುವವರು, ನಗರ ಪ್ರದೇಶಗಳಲ್ಲಿ ಒಂದು ಸಾವಿರ ಚದರ ಅಡಿ RCC ಮನೆ ಹೊಂದಿರುವವರು, ನಾಲ್ಕು ಚಕ್ರದ ವಾಹನ ಹೊಂದಿರುವವರು ಬಡತನ ರೇಖೆಗಿಂತ ಕೆಳಗಿನ ಪಟ್ಟಿಯಲ್ಲಿ ಬರುವುದಿಲ್ಲ ಅಂಥವರು BPL Ration Card ಪಡೆಯಲು ಅನರ್ಹರಾಗಿದ್ದು ಕೂಡಲೇ ಕಾರ್ಡ್ ಹಿಂದಿರುಗಿಸಿದಲ್ಲಿ ಅರ್ಹ ಅರ್ಹಫಲಾನುಭವಿಗಳಿಗೆ ಹೆಚ್ಚಿನ ಸೌಲಭ್ಯವನ್ನು ನೀಡಬಹುದಾಗಿದೆ.” ಎಂದು ತಿಳಿಸಿದರು.
ಕಂದಾಯ ನಿರೀಕ್ಷಕ ಸಿ.ಸ್ವಾಮಿ, ಗ್ರಾ.ಪಂ ಅಧ್ಯಕ್ಷೆ ಅನುಷಾ ಯೋಗೇಶ್, ಪಿಡಿಒ ಮಂಜುನಾಥ್, ಗ್ರಾಮಲೆಕ್ಕಿಗ ಮದನ್ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.