back to top
26.3 C
Bengaluru
Friday, July 18, 2025
HomeBusinessBrahmos Power: ಅಮೆರಿಕ ಮತ್ತು ಚೀನಾ ನೆರಳಲ್ಲಿರುವ ದೇಶಗಳಿಂದ ಭಾರತದ ಕ್ಷಿಪಣಿಗೆ ಹೆಚ್ಚಿದ ಬೇಡಿಕೆ

Brahmos Power: ಅಮೆರಿಕ ಮತ್ತು ಚೀನಾ ನೆರಳಲ್ಲಿರುವ ದೇಶಗಳಿಂದ ಭಾರತದ ಕ್ಷಿಪಣಿಗೆ ಹೆಚ್ಚಿದ ಬೇಡಿಕೆ

- Advertisement -
- Advertisement -

New Delhi:  ಪಾಕಿಸ್ತಾನ ವಿರುದ್ಧ ನಡೆದ ‘ಆಪರೇಷನ್ ಸಿಂದೂರ’ ನಲ್ಲಿ ಭಾರತದಿಗೆ ಮಹತ್ವದ ಗೆಲುವು ತಂದುಕೊಟ್ಟ ಅಸ್ತ್ರಗಳಲ್ಲಿ ಪ್ರಮುಖವಾದದ್ದು ಬ್ರಹ್ಮೋಸ್ (Brahmos) ಕ್ರೂಸ್ ಮಿಸೈಲ್. ಈ ಕ್ಷಿಪಣಿಯಿಂದ ಪಾಕಿಸ್ತಾನದ ಹಲವು ಸ್ಥಳಗಳಲ್ಲಿ ತೀವ್ರ ದಾಳಿ ನಡೆಸಲಾಗಿತ್ತು. ರಾಡಾರ್ ಅಥವಾ ಯಾವುದೇ ರಕ್ಷಣಾ ವ್ಯವಸ್ಥೆಗೆ ಅಂಟಿಕೊಳ್ಳದೇ ಗುರಿ ತಲುಪುವ ಬ್ರಹ್ಮೋಸ್, ತನ್ನ ತಂತ್ರಜ್ಞಾನ ಶಕ್ತಿಯಿಂದ ಎಲ್ಲರ ಗಮನ ಸೆಳೆದಿದೆ.

ಈ ಯಶಸ್ಸಿನ ಬಳಿಕ, ಬ್ರಹ್ಮೋಸ್ ಖರೀದಿಸಲು ಆಸಕ್ತಿ ತೋರುತ್ತಿರುವ ದೇಶಗಳ ಸಂಖ್ಯೆ ಹೆಚ್ಚಾಗುತ್ತಿದೆ. ವರದಿಯ ಪ್ರಕಾರ ಸುಮಾರು 17 ದೇಶಗಳು ಭಾರತದಿಂದ ಈ ಕ್ಷಿಪಣಿಯನ್ನು ಪಡೆಯಲು ಮುಂದಾಗಿವೆ.

ಭಾರತ ಹಾಗೂ ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಸೂಪರ್ಸೋನಿಕ್ ಕ್ಷಿಪಣಿ, ಭೂಮಿ, ವಾಯು ಮತ್ತು ಸಮುದ್ರದಿಂದ ಲಾಂಚ್ ಮಾಡಬಹುದಾಗಿದೆ. ನಿಖರ ಗುರಿತಪ್ಪದೇ ಹೊಡೆದಾಟ ನಡೆಸುವ ಶಕ್ತಿ, ವಿವಿಧ ವಾತಾವರಣಗಳಿಗೆ ತಕ್ಕವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಇವು ಬ್ರಹ್ಮೋಸ್‌ಗೆ ಭಾರೀ ಬೇಡಿಕೆಯನ್ನು ತಂದಿವೆ.

ಫಿಲಿಪ್ಪೈನ್ಸ್ ದೇಶವು 2022ರಲ್ಲಿ ಭಾರತದಿಂದ ಮೂರು ಡಿಫೆನ್ಸ್ ಬ್ಯಾಟರಿಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು. ಇದರಲ್ಲಿ ಒಂದನ್ನು ಭಾರತ ಈಗಾಗಲೇ ಸರಬರಾಜು ಮಾಡಿದೆ.

ಬ್ರಹ್ಮೋಸ್‌ ಮೇಲೆ ಆಸಕ್ತಿ ತೋರಿರುವ ಇತರೆ ದೇಶಗಳು

  • ಆಗ್ನೇಯ ಏಷ್ಯಾ: ಇಂಡೋನೇಷ್ಯಾ, ವಿಯೆಟ್ನಾಂ, ಮಲೇಷ್ಯಾ, ಥಾಯ್ಲೆಂಡ್, ಸಿಂಗಾಪುರ್, ಬ್ರೂನೇ
  • ಅಮೆರಿಕನ್ ಖಂಡ: ಬ್ರೆಜಿಲ್, ಚಿಲಿ, ಅರ್ಜೆಂಟೀನಾ, ವೆನಿಜುವೆಲಾ
  • ಮಧ್ಯಪ್ರಾಚ್ಯ: ಸೌದಿ ಅರೇಬಿಯಾ, ಕತಾರ್, ಓಮನ್, ಯುಎಇ, ಈಜಿಪ್ಟ್
  • ಇತರೆ: ದಕ್ಷಿಣ ಆಫ್ರಿಕಾ, ಬಲ್ಗೇರಿಯಾ

ಈ ಪಟ್ಟಿಯಲ್ಲಿನ ಬಹುತೇಕ ರಾಷ್ಟ್ರಗಳು ಅಮೆರಿಕ ಅಥವಾ ಚೀನಾದ ಪ್ರಭಾವವಿರುವ ಪ್ರದೇಶಗಳಲ್ಲಿವೆ ಎಂಬುದೇ ಹೆಚ್ಚು ಗಮನ ಸೆಳೆಯುತ್ತಿದೆ. ಉದಾಹರಣೆಗೆ, ವಿಯೆಟ್ನಾಂ 700 ಮಿಲಿಯನ್ ಡಾಲರ್‌ ಮೌಲ್ಯದ ಬ್ರಹ್ಮೋಸ್ ಒಪ್ಪಂದಕ್ಕೆ ಸಿದ್ಧವಾಗಿದ್ದು, ಮಲೇಷ್ಯಾ ಮತ್ತು ಇಂಡೋನೇಷ್ಯಾ ಸಹ ವಿಭಿನ್ನ ರೂಪದ ಬ್ರಹ್ಮೋಸ್ ಗಳಿಗೆ ಆಸಕ್ತಿ ತೋರಿಸುತ್ತಿವೆ.

ಬ್ರಹ್ಮೋಸ್ ಕ್ಷಿಪಣಿಯ ತಂತ್ರಜ್ಞಾನ ಮತ್ತು ಪರಿಣಾಮಕಾರಿತ್ವದ ಹಿನ್ನೆಲೆಯಲ್ಲಿ, ಭಾರತ ಈಗ ಕ್ಷಿಪಣಿಯ ರಫ್ತು ಕ್ಷೇತ್ರದಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ಭಾರತದ ರಕ್ಷಣಾ ಉದ್ಯಮಕ್ಕೆ ಇದು ಹೊಸ ದಾರಿ ತೆರೆಯುತ್ತಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page