back to top
23 C
Bengaluru
Thursday, November 21, 2024
HomeIndiaNew DelhiBRICS Summit: Iran, China ಅಧ್ಯಕ್ಷರೊಂದಿಗೆ PM Modi ಮಾತುಕತೆ

BRICS Summit: Iran, China ಅಧ್ಯಕ್ಷರೊಂದಿಗೆ PM Modi ಮಾತುಕತೆ

- Advertisement -
- Advertisement -

Kazan: ‘ಬ್ರಿಕ್ಸ್ ಶೃಂಗಸಭೆ (BRICS summit) ವೇಳೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್​ರೊಂದಿಗೆ (Iranian President Masoud Pezheshkian) ಪ್ರಧಾನಿ ಮೋದಿ (Prime Minister Modi) ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ, ಭಾರತ ಮತ್ತು ಇರಾನ್ ನಡುವಿನ ಸಂಬಂಧಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು ಎಂದು ಪ್ರಧಾನಿ ಮೋದಿ ಅವರು ಮಂಗಳವಾರ ಹೇಳಿದ್ದಾರೆ.

ರಷ್ಯಾದ ಕಜಾನ್ ನಗರದಲ್ಲಿ ವ್ಲಾಡಿಮಿರ್ ಪುಟಿನ್ ಆಯೋಜಿಸಿರುವ 16ನೇ BRICS ಶೃಂಗಸಭೆಯ ಮೊದಲ ದಿನದ ಮಾತುಕತೆ ಯಶಸ್ವಿಯಾಗಿ ಮಂಗಳವಾರ ನಡೆದಿದೆ. ಇಂದು ಕೂಡ ಶೃಂಗಸಭೆಯ 2ನೇ ದಿನದ ಅಧಿವೇಶನಗಳು ಮುಂದುವರೆಯಲಿವೆ.

ಈ ಶೃಂಗಸಭೆಯಲ್ಲಿ ಭಾಗವಹಿಸಿರುವ ಮೋದಿ ಅವರು ಸಭೆಯಲ್ಲಿ ನಡೆದ ಮಾತುಕತೆಯ ಬಗ್ಗೆ ತಮ್ಮ X ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

“ಇರಾನ್ನ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಉತ್ತಮ ಸಭೆಯನ್ನು ನಡೆಸಿದ್ದೇವೆ. ನಾವು ನಮ್ಮ ದೇಶಗಳ ನಡುವಿನ ಸಂಪೂರ್ಣ ಶ್ರೇಣಿಯ ಸಂಬಂಧಗಳನ್ನು ಪರಿಶೀಲಿಸಿದ್ದೇವೆ.

ಭವಿಷ್ಯದಲ್ಲಿ 2 ದೇಶಗಳ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಮಾರ್ಗಗಳ ಬಗ್ಗೆಯೂ ನಾವು ಚರ್ಚಿಸಿದ್ದೇವೆ” ಎಂದು ಬರೆದು ಮೋದಿ ಅವರು ಪೋಸ್ಟ್ ಹಾಕಿಕೊಂಡಿದ್ದಾರೆ.

ಶೃಂಗಸಭೆಯಲ್ಲಿ ಇರಾನ್ ದೇಶವನ್ನು ಬ್ರಿಕ್ಸ್ ಕುಟುಂಬಕ್ಕೆ ಸ್ವಾಗತಿಸಲಾಯಿತು ಚಬಹಾರ್ ಬಂದರಿನ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕುವುದು ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಮುಖ ಮೈಲಿಗಲ್ಲು ಎಂದು ಗಮನಿಸಲಾಗಿದೆ.

ಅಫ್ಘಾನಿಸ್ತಾನದ ಪುನರ್ನಿರ್ಮಾಣ ಮತ್ತು ಪುನರಾಭಿವೃದ್ಧಿಗೆ ಮತ್ತು ಮಧ್ಯ ಏಷ್ಯಾದೊಂದಿಗೆ ವ್ಯಾಪಾರ ಮತ್ತು ಆರ್ಥಿಕ ಸಂಪರ್ಕಗಳನ್ನು ಹೆಚ್ಚಿಸಲು ಇಬ್ಬರು ನಾಯಕರು ಅದರ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದ್ದಾರೆ ಉಭಯ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

China ಅಧ್ಯಕ್ಷರೊಂದಿಗೆ PM Modi ಮಾತುಕತೆ

ಬ್ರಿಕ್ಸ್ ಶೃಂಗಸಭೆಯಲ್ಲಿ (BRICS summit) ಪಾಲ್ಗೊಂಡಿರುವ ಪ್ರಧಾನಿ ಮೋದಿ (Prime Minister Modi) ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ (Chinese President Xi Jinping) ನಡುವೆ ಬುಧವಾರ ಅಕ್ಟೋಬರ್ 23 ರಂದು ದ್ವಿಪಕ್ಷೀಯ ಸಭೆ ನಡೆಯಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮಂಗಳವಾರ ಖಚಿತಪಡಿಸಿದ್ದಾರೆ

ಕಳೆದ ಹಲವು ವಾರಗಳಿಂದ ಭಾರತ ಮತ್ತು ಚೀನಾದ ರಾಜತಾಂತ್ರಿಕ ಮತ್ತು ಮಿಲಿಟರಿ ಸಮಾಲೋಚಕರು ವಿವಿಧ ವೇದಿಕೆಗಳಲ್ಲಿ ಪರಸ್ಪರ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಈ ಹೇಳಿಕೆ ನಂತರ ಭಾರತದ ಪ್ರಧಾನಿ ಹಾಗೂ ಚೀನಾ ಅಧ್ಯಕ್ಷರ ನಡುವೆ ಇಂದು ದ್ವಿಪಕ್ಷೀಯ ಮಾತುಕತೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಇಂದು ಕಜಾನ್‌ಗೆ ಪ್ರಧಾನಿ ಮೋದಿಯವರ ಭೇಟಿಯ ಕುರಿತು ವಿಶೇಷ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, LAC ಉದ್ದಕ್ಕೂ ಗಡಿ ಗಸ್ತು ತಿರುಗುವ ಕುರಿತು ಭಾರತ – ಚೀನಾ ಒಪ್ಪಂದಕ್ಕೆ ಬರುತ್ತಿರುವ ಪ್ರಶ್ನೆಗೆ ಉತ್ತರಿಸಿದರು.

“ಚರ್ಚೆಯಲ್ಲಿರುವ ಬಾಕಿ ಇರುವ ಪ್ರದೇಶಗಳಲ್ಲಿ ಗಸ್ತು ತಿರುಗುವಿಕೆ ಮತ್ತು ವಾಸ್ತವವಾಗಿ ಕುರಿಗಾಯಿಗಳ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಗಿದೆ. 2020 ರಲ್ಲಿ ಗಡಿಯಲ್ಲಿ ಯಾವ ಪ್ರಕ್ರಿಯೆಗಳಿದ್ದವು ಅವೆಲ್ಲವನ್ನು ಮರುಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

“ಈ ಹಿಂದೆ ಮಾಡಿಕೊಂಡಿರುವ ಒಪ್ಪಂದಗಳ ಬಗ್ಗೆ ಹೇಳುವುದಾದರೆ, ಈ ಚರ್ಚೆಗಳಲ್ಲಿ ಆ ಒಪ್ಪಂದಗಳನ್ನು ಮತ್ತೆ ಪ್ರಸ್ತಾಪ ಮಾಡಲಾಗಿಲ್ಲ.

ನಿನ್ನೆ ತಲುಪಿದ ಒಪ್ಪಂದವು ಕಳೆದೆರಡು ವರ್ಷಗಳಲ್ಲಿ ಬಾಕಿ ಉಳಿದಿರುವ ವಿಷಯಗಳ ಮೇಲೆ ಕೇಂದ್ರೀಕರಿಸಿದೆ” ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page