Bidar: ಬೀದರ್ ಜಿಲ್ಲಾ ಆಸ್ಪತ್ರೆಗೆ ಸೇರಿದ ಬ್ರಿಮ್ಸ್ (BRIMS Hospital) ಕಳೆದ 15 ವರ್ಷಗಳಿಂದ ಕೋಟ್ಯಾಂತರ ರೂಪಾಯಿ ತೆರಿಗೆ ಮತ್ತು ಬಿಲ್ ಪಾವತಿಸಿಲ್ಲ. ಈ ಮುನ್ನಾ ಸಾರ್ವಜನಿಕ ಸೇವೆಗಳಿಗೆ ಬೇಕಾದ ನೀರಿನ, ಆಸ್ತಿ ಕರ ಹಾಗೂ ವಿದ್ಯುತ್ ಬಿಲ್ ಸೇರಿ 10.98 ಕೋಟಿ ರೂಪಾಯಿ ಬಾಕಿ ಉಳಿದಿದೆ.
ಬಾಕಿ ಉಳಿದಿರುವ ಮೊತ್ತ
- ನೀರಿನ ಕರ: ₹1.45 ಕೋಟಿ
- ಆಸ್ತಿ ಕರ: ₹8.32 ಕೋಟಿ
- ವಿದ್ಯುತ್ ಬಿಲ್: ₹2.21 ಲಕ್ಷ
ಬೀದರ್ ನಗರಸಭೆ ಹಲವಾರು ಬಾರಿ ನೋಟೀಸ್ ನೀಡಿದರೂ ಬ್ರಿಮ್ಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ಕೋಪಗೊಂಡ ನಗರಸಭೆ ನೀರು ಸರಬರಾಜು ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದೆ.
ತದನಂತರ, 2010 ರಿಂದ 2025ರ ಜನವರಿವರೆಗೆ ಬ್ರಿಮ್ಸ್ ಒಟ್ಟು 9.77 ಲಕ್ಷ ರೂ. ನೀರಿನ ಹಾಗೂ ಆಸ್ತಿ ತೆರಿಗೆ ಪಾವತಿಸಬೇಕಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ವಸೂಲಿ ಪ್ರಕ್ರಿಯೆ ವಿಳಂಬಗೊಂಡಿದೆ. ಸಾರ್ವಜನಿಕರು “ಸಾಮಾನ್ಯ ಜನರು ತೆರಿಗೆ ಪಾವತಿಸದಿದ್ದರೆ ಕ್ರಮ ಕೈಗೊಳ್ಳುತ್ತಾರೆ, ಆದರೆ ಬ್ರಿಮ್ಸ್ ಮೇಲೆ ಯಾವುದೇ ಕ್ರಮವಿಲ್ಲವೇ?” ಎಂದು ಪ್ರಶ್ನಿಸುತ್ತಿದ್ದಾರೆ.
ಜೆಸ್ಕಾಂ ಕೂಡಾ ಹಲವು ಬಾರಿ ವಿದ್ಯುತ್ ಬಿಲ್ ಪಾವತಿಯ ನೋಟೀಸ್ ನೀಡಿದರೂ, ಅದನ್ನು ಬ್ರಿಮ್ಸ್ ಲೆಕ್ಕಿಸಿಲ್ಲ. ಜನಸಾಮಾನ್ಯರು ವಿದ್ಯುತ್ ಬಿಲ್ ಪಾವತಿಸದಿದ್ದರೆ ತಕ್ಷಣ ಕಟ್ ಮಾಡುತ್ತಾರೆ, ಆದರೆ ಬ್ರಿಮ್ಸ್ ಮೇಲೆ ಇಂತಹ ಕ್ರಮ ಏಕೆ ತೆಗೆದುಕೊಳ್ಳುವುದಿಲ್ಲ? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.