IPL 2025ನಲ್ಲಿ ಚೊಚ್ಚಲ ಟ್ರೋಫಿ ಗೆಲ್ಲುವ ಗುರಿಯೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸಜ್ಜಾಗುತ್ತಿದೆ. ಆದರೆ, ಈ ಬಾರಿ ಕೂಡ RCB ಸೋಲುವುದರಿಂದ ತಪ್ಪಿಸಿಕೊಳ್ಳುವುದಿಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಡಂ Gilchrist ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಅವರ “ಕ್ಲಬ್ ಪ್ರೈರಿ ಫೈರ್” ಪಾಡ್ಕಾಸ್ಟ್‌ನಲ್ಲಿ ಮಾತನಾಡಿದ Gilchrist,
- RCBಗೆ ಈ ಸಲ ಕೊನೆಯ ಸ್ಥಾನ ಸಿಗುವ ಸಾಧ್ಯತೆ ಇದೆ.
- ತಂಡದಲ್ಲಿ ಇಂಗ್ಲೆಂಡ್ ಆಟಗಾರರು ಹೆಚ್ಚಿರುವುದರಿಂದ ಗೆಲ್ಲುವುದು ಕಷ್ಟ.
- RCB ಅಭಿಮಾನಿಗಳಿಗೆ ಮೊದಲು ಕ್ಷಮೆ ಕೇಳುತ್ತೇನೆ, ಆದರೆ ನಿಮ್ಮ ಆಯ್ಕೆಗಾರರು ಯೋಗ್ಯ ಆಟಗಾರರನ್ನು ಆರಿಸಿಲ್ಲ.
RCB ತಂಡದ ಇಂಗ್ಲೀಷ್ ಆಟಗಾರರು
ಈ ಬಾರಿಯ RCB ತಂಡದಲ್ಲಿ ಮೂರು ಇಂಗ್ಲೆಂಡ್ ಆಟಗಾರರು
- ಫಿಲ್ ಸಾಲ್ಟ್
- ಲಿಯಾಮ್ ಲಿವಿಂಗ್ಸ್ಟೋನ್
- ಜೇಕಬ್ ಬೆಥೆಲ್
ಇವರು ಹಿಂದಿನ ಟಿ20 ಸರಣಿಯಲ್ಲಿ ಭಾರತದ ವಿರುದ್ಧ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ RCB ಗೆಲಲು ಸಾಧ್ಯವಿಲ್ಲ ಎಂಬುದಾಗಿ Gilchrist ಹೇಳಿದ್ದಾರೆ.
RCB ತಂಡದ ವಿದೇಶಿ ಆಟಗಾರರು
ಫಿಲ್ ಸಾಲ್ಟ್ (ಇಂಗ್ಲೆಂಡ್)
- ಲಿಯಾಮ್ ಲಿವಿಂಗ್ಸ್ಟೋನ್ (ಇಂಗ್ಲೆಂಡ್)
- ಜೇಕಬ್ ಬೆಥೆಲ್ (ಇಂಗ್ಲೆಂಡ್)
- ಟಿಮ್ ಡೇವಿಡ್ (ಆಸ್ಟ್ರೇಲಿಯಾ)
- ಜೋಶ್ ಹ್ಯಾಝಲ್ವುಡ್ (ಆಸ್ಟ್ರೇಲಿಯಾ)
- ಲುಂಗಿ ಎನ್ಗಿಡಿ (ಸೌತ್ ಆಫ್ರಿಕಾ)
- ರೊಮಾರಿಯೊ ಶೆಫರ್ಡ್ (ವೆಸ್ಟ್ ಇಂಡೀಸ್)
- ನುವಾನ್ ತುಷಾರ (ಶ್ರೀಲಂಕಾ)
RCB ತಂಡ (2025): ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್, ಲಿಯಾಮ್ ಲಿವಿಂಗ್ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹ್ಯಾಝಲ್ವುಡ್, ರಾಸಿಖ್ ಸಲಾಂ, ಸುಯೇಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ನುವಾನ್ ತುಷಾರ, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಮನೋಜ್ ಭಾಂಡಗೆ, ಸ್ವಸ್ತಿಕ್ ಚಿಕಾರ, ದೇವದತ್ ಪಡಿಕ್ಕಲ್, ಮೋಹಿತ್ ರಾಠಿ, ಅಭಿನಂದನ್ ಸಿಂಗ್, ಲುಂಗಿ ಎನ್ಗಿಡಿ.RCB ಈ ಬಾರಿಯೂ ಕಪ್ ಗೆಲ್ಲುವೋ? ಅಥವಾ ಗಿಲ್ಕ್ರಿಸ್ಟ್ ಭವಿಷ್ಯ ನಿಜವಾಗುವುದೋ? ಕಾಯಬೇಕಷ್ಟೇ