back to top
28.2 C
Bengaluru
Saturday, August 30, 2025
HomeAutoBikeಭಾರತಕ್ಕೆ ಬರಲಿದೆ Brixton Motorcycles

ಭಾರತಕ್ಕೆ ಬರಲಿದೆ Brixton Motorcycles

- Advertisement -
- Advertisement -

ಭಾರತವು (India) ಚೀನಾವನ್ನು (China) ಮೀರಿಸಿ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ (two-wheeler market) ಮಾರುಕಟ್ಟೆಯಾಗಿದೆ.

ಯಾವುದೇ ರೀತಿಯ ದ್ವಿಚಕ್ರ ವಾಹನಗಳನ್ನು (two-wheeler) ಖರೀದಿಸಲು ಇಲ್ಲಿ ಜನರಿದ್ದಾರೆ ಎಂಬುದು ಕುತೂಹಲಕಾರಿ ಸಂಗತಿ. ಪ್ರೀಮಿಯಂ ಮೋಟಾರ್‌ಸೈಕಲ್‌ಗಳಿಗೆ (premium motorcycle) ಭಾರಿ ಬೇಡಿಕೆಯೊಂದಿಗೆ, ಜಾಗತಿಕ ಕಂಪನಿಗಳು ದೇಶಕ್ಕೆ ಬಂದಿವೆ.

ಆಸ್ಟ್ರಿಯನ್ ದ್ವಿಚಕ್ರ ವಾಹನ (Austrian two-wheeler) ತಯಾರಕ ಬ್ರಿಕ್ಸ್‌ಟನ್ ಮೋಟಾರ್‌ಸೈಕಲ್ಸ್ (Brixton Motorcycles) ಭಾರತಕ್ಕೆ ಎಂಟ್ರಿ ಕೊಡುವುದಾಗಿ ಘೋಷಿಸಿದೆ. ಈ ಇದೀಗ ಬ್ರಿಕ್ಸ್‌ಟನ್ (Brixton) ತಮ್ಮ ಮಾಡೆಲ್‌ಗಳ ಅಧಿಕೃತ ಬುಕಿಂಗ್ ಕೂಡ ಪ್ರಾರಂಭವಾಗಿದೆ ಎಂದು ಘೋಷಿಸಿದ್ದಾರೆ.

ಕಂಪನಿಯು ನವೆಂಬರ್‌ನಲ್ಲಿ ಭಾರತದಲ್ಲಿ ಕ್ರಾಸ್‌ಫೈರ್ 500 ಎಕ್ಸ್, ಕ್ರಾಸ್‌ಫೈರ್ 500 ಎಕ್ಸ್‌ಸಿ, ಕ್ರಾಮ್‌ವೆಲ್ 1200 ಮತ್ತು ಕ್ರಾಮ್‌ವೆಲ್ 1200 ಎಕ್ಸ್ ಸೇರಿದಂತೆ ನಾಲ್ಕು ಮಾದರಿಗಳನ್ನು ಬಿಡುಗಡೆ ಮಾಡಲಿದೆ.

ಆಸ್ಟ್ರಿಯಾದ ದ್ವಿಚಕ್ರ ವಾಹನ ತಯಾರಕ ಕಂಪನಿಯು KAW ವೆಲೋಸ್ ಮೋಟಾರ್ಸ್ ಪ್ರೈವೇಟ್ ಪಾಲುದಾರಿಕೆಯಲ್ಲಿ ಭಾರತಕ್ಕೆ ಬರುತ್ತಿದೆ. ಈ ಬ್ರಿಕ್ಸ್‌ಟನ್ ಕಂಪನಿಯು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಉತ್ಪಾದನಾ ಘಟಕವನ್ನು ಯೋಜಿಸಿದೆ.

Brixton Motorcycles

ಬ್ರಿಕ್ಸ್‌ಟನ್ ಮೋಟಾರ್‌ಸೈಕಲ್ ಕಂಪನಿಯು KSR ಗ್ರೂಪ್ ಒಡೆತನದಲ್ಲಿದೆ. KVMPLನೊಂದಿಗೆ ಎರಡು ವರ್ಷಗಳ ಯೋಜನೆ ನಂತರ ತನ್ನ ಭಾರತೀಯ ಪ್ರವೇಶವನ್ನು ಘೋಷಿಸಲಾಗಿದೆ ಎಂದು ಬ್ರಿಕ್ಸ್‌ಟನ್ ಕಂಪನಿಯು ಹೇಳಿಕೊಂಡಿದೆ.

ಕಂಪನಿಯು ಈ ವರ್ಷ ಭಾರತದಲ್ಲಿ ನಾಲ್ಕು ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಮಾದರಿಗಳಿಗೆ ಸಂಬಂಧಿಸಿದಂತೆ, ಕ್ರಾಸ್‌ಫೈರ್ ಮಾದರಿಗಳು 500cc ಟ್ವಿನ್-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಲಿದೆ.

ಇದು 8,500rpm ನಲ್ಲಿ 46bhp ಮತ್ತು 4,350rpm ನಲ್ಲಿ 43Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬ್ರಿಕ್ಸ್‌ಟನ್ ಮೋಟಾರ್‌ಸೈಕಲ್ಸ್‌ನ ಕ್ರಾಮ್‌ವೆಲ್ ಮಾದರಿಗಳು 1,200 cc ಟ್ವಿನ್-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದ್ದು, ಅದು 6,500 rpm ನಲ್ಲಿ 82 bhp ಶಕ್ತಿಯನ್ನು ಮತ್ತು 3,100 rpm ನಲ್ಲಿ 108 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page