back to top
19.9 C
Bengaluru
Sunday, August 31, 2025
HomeKarnatakaChamarajanagaraಚಿರತೆಯನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟ ಸಿಬ್ಬಂದಿ

ಚಿರತೆಯನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟ ಸಿಬ್ಬಂದಿ

- Advertisement -
- Advertisement -

Chamarajanagara : ವೀರನಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಹಾವಳಿಯ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ (BRT Tiger Reserve) ಹುಲಿ ಸಂರಕ್ಷಿತ ಪ್ರದೇಶದ ಸಿಬ್ಬಂದಿ ಚಿರತೆ ಸೆರೆಗಾಗಿ ಇರಿಸಿದ್ದ ಬೋನಿಗೆ ಬಿದ್ದಿದ್ದ ಗಂಡು ಚಿರತೆಯನ್ನು ಕಾಡಿಗೆ ಬಿಡಲಾಯಿತು.

ಬಿಆರ್‌ಟಿ ಉಪ‍ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್‌ ಕುಮಾರ್‌ ಮಾತನಾಡಿ “ಶನಿವಾರ ಬೆಳಿಗ್ಗೆ ಸುಮಾರು ಎರಡು ವರ್ಷದ ಗಂಡು ಚಿರತೆ ಬೋನಿನಲ್ಲಿ ಸೆರೆಯಾಗಿದ್ದು ನಂತರ ಸುರಕ್ಷಿತವಾಗಿ ಬಿಆರ್‌ಟಿಯ ದಟ್ಟ ಅರಣ್ಯ ಭಾಗದಲ್ಲಿ ಬಿಡಲಾಗಿದೆ” ಎಂದು ಖಚಿತಪಡಿಸಿದರು.

ಚಾಮರಾಜನಗರ ವಲಯದಲ್ಲಿ ಐದು ತಿಂಗಳ ಅವಧಿಯಲ್ಲಿ ಅರಣ್ಯ ಇಲಾಖೆಯವರು ಆರು ಚಿರತೆಗಳನ್ನು ಸೆರೆ ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page