New Delhi: ಸರ್ಕಾರಿ ಸ್ವಾಮ್ಯದ BSNL ಕಡಿಮೆ ಬೆಲೆಯ ಪ್ರಿಪೇಯ್ಡ್ ಪ್ಲಾನ್ ಗಳನ್ನು ಪರಿಚಯಿಸುತ್ತಿದ್ದು, ತನ್ನ ಗ್ರಾಹಕರನ್ನು ಹೆಚ್ಚಿಸಿಕೊಳ್ಳುತ್ತಿದೆ. ಈ ಮೂಲಕ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ (Jio, Airtel, Vodafone) ಐಡಿಯಾಗಳಿಗೆ ತಲೆನೋವಾಗಿ ಪರಿಣಮಿಸಿದೆ. ಕಡಿಮೆ ಬೆಲೆಯ ಜೊತೆಗೆ ದೀರ್ಘಕಾಲೀನ ವ್ಯಾಲಿಡಿಟಿಯ ಪ್ಲಾನ್ ಗಳನ್ನು ಬಿಡುಗಡೆ ಮಾಡಿರುವ BSNL, ತನ್ನ 4G network ವ್ಯಾಪ್ತಿಯನ್ನು ವಿಸ್ತರಿಸಲು 65,000 ಹೊಸ ಮೊಬೈಲ್ ಟವರ್ ಗಳನ್ನು ಅಳವಡಿಸಿದೆ. ಶೀಘ್ರದಲ್ಲಿಯೇ ಈ ಸಂಖ್ಯೆ 1,00,000 ದಾಟಲಿದೆ ಎಂದು ಕಂಪನಿ ತಿಳಿಸಿದೆ.
BSNL ತನ್ನ ಎಕ್ಸ್ ಖಾತೆಯಲ್ಲಿ 347 ರೂ. ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿದ್ದು, ಇದು 54 ದಿನಗಳ ವ್ಯಾಲಿಡಿಟಿಯೊಂದಿಗೆ ಲಭ್ಯ. ಈ ಪ್ಲಾನ್‌ನಡಿಯಲ್ಲಿ:
- ಪ್ರತಿದಿನ 2GB ಹೈಸ್ಪೀಡ್ ಡೇಟಾ
- ಉಚಿತ 100 SMS
- ಅನಿಯಮಿತ ಕರೆಗಳು (ದೆಹಲಿ ಮತ್ತು ಮುಂಬೈನಲ್ಲಿ MTNL ಬಳಕೆದಾರರಿಗೆ ಸಹ ಲಭ್ಯ)
- 450 ಲೈವ್ ಟಿವಿ ಚಾನೆಲ್ ಮತ್ತು OTT ಸೇವೆಗಳ ಉಚಿತ ಸಬ್ಸ್ಕ್ರಿಪ್ಷನ್
BSNL 4G network ವಿಸ್ತರಣೆಗಾಗಿ ಕೇಂದ್ರ ಸರ್ಕಾರದಿಂದ 6,000 ಕೋಟಿ ರೂ. ಅನುದಾನವನ್ನು ಸ್ವೀಕರಿಸಿದೆ. ಈ ಅನುದಾನವು ಬಿಎಸ್ಎನ್ಎಲ್ ಮತ್ತು MTNL ಸೇವೆಗಳ ಗುಣಮಟ್ಟ ಸುಧಾರಿಸಲು ಸಹಾಯ ಮಾಡಲಿದೆ.
ಗ್ರಾಹಕರಿಗೆ ಅಪ್ರಸ್ತುತ ಮಾರ್ಕೆಟಿಂಗ್ ಕರೆಗಳಿಂದ ಮುಕ್ತಿ ನೀಡಲು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಹೊಸ ಕ್ರಮಗಳನ್ನು ಕೈಗೊಂಡಿದ್ದು, ಈ ರೀತಿಯ ಕರೆ ಮಾಡುವ ಕಂಪನಿಗಳಿಗೆ 10 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು. ಜೊತೆಗೆ, ಗ್ರಾಹಕರಿಗೆ ರಕ್ಷಣೆ ನೀಡಲು TRAI ಹೊಸ Do-Not-Disturb (DND) ಅಪ್ಲಿಕೇಶನ್ ಬಿಡುಗಡೆ ಮಾಡಿದೆ.