back to top
22.2 C
Bengaluru
Wednesday, October 8, 2025
HomeTechnologyಭಾರತದಲ್ಲಿ BSNL ನಿಂದ Satellite Phone ತಂತ್ರಜ್ಞಾನ

ಭಾರತದಲ್ಲಿ BSNL ನಿಂದ Satellite Phone ತಂತ್ರಜ್ಞಾನ

- Advertisement -
- Advertisement -

ಜಗತ್ತು ತಾಂತ್ರಿಕವಾಗಿ ಮುನ್ನಡೆಯುತ್ತಿದೆ. ಎಲ್ಲವೂ ತಂತ್ರಜ್ಞಾನ ಪ್ರೇರಿತವಾಗುತ್ತಿದೆ. ಉಪಗ್ರಹ ಸಂವಹನ ಕಂಪನಿ Viasat, ರಾಜ್ಯ-ಚಾಲಿತ ಟೆಲ್ಕೊ BSNL ಸಹಯೋಗದೊಂದಿಗೆ ಭಾರತದಲ್ಲಿ ಮೊದಲ ಬಾರಿಗೆ ಡೈರೆಕ್ಟ್-ಟು-ಡಿವೈಸ್ (direct-to-device-D2D) Satellite Phone ಸಂಪರ್ಕವನ್ನು ತರುತ್ತಿದೆ.

ಈ ಸಂಬಂಧ ಪ್ರಯೋಗ ಯಶಸ್ವಿಯಾಗಿ ನಡೆದಿದೆ. BSNL ಸಹಯೋಗದೊಂದಿಗೆ Viasat ಇಂಜಿನಿಯರ್‌ಗಳು ಉಪಗ್ರಹ ಆಧಾರಿತ ದ್ವಿಮುಖ ಸಂದೇಶ ಸೇವೆ ಜಾರಿಗೆ ತಂದಿದೆ.

D2D ಸಂಪರ್ಕದ ಮೂಲಕ, ಸಾಮಾನ್ಯವಾಗಿ ಬಳಸುವ ಸಾಧನಗಳಾದ ಮೊಬೈಲ್ ಫೋನ್‌ಗಳು, ಸ್ಮಾರ್ಟ್ ವಾಚ್‌ಗಳು ಅಥವಾ ಕಾರುಗಳು, ಕೈಗಾರಿಕಾ ಯಂತ್ರಗಳು, ಸಾರಿಗೆ ಯಂತ್ರಗಳನ್ನು ಯಾವುದೇ ವಿಶೇಷ ಯಂತ್ರಾಂಶದ ಅಗತ್ಯವಿಲ್ಲದೆ ಉಪಗ್ರಹ ನೆಟ್‌ವರ್ಕ್‌ ಜೊತೆಗೆ ಸಂಪರ್ಕ ಸಾಧಿಸಬಹುದಾಗಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಇದು ಲಭ್ಯವಾಗಲಿದೆ.

D2D ತಂತ್ರಜ್ಞಾನ

ಡೈರೆಕ್ಟ್-ಟು-ಡಿವೈಸ್ (direct-to-device-D2D) ಅನ್ನೋದು ಯಾವುದೇ ಹೆಚ್ಚುವರಿ ಹಾರ್ಡ್‌ವೇರ್ ಅಗತ್ಯವಿಲ್ಲದೇ ಸಾಮಾನ್ಯ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು ಮುಂತಾದ ಸಾಧನಗಳನ್ನು ನೇರವಾಗಿ ಉಪಗ್ರಹ ನೆಟ್‌ವರ್ಕ್‌ಗಳಿಗೆ ಸಂಪರ್ಕಿಸುವ ತಂತ್ರಜ್ಞಾನ.

ಸಾಂಪ್ರದಾಯಿಕ ಇಂಟರ್ನೆಟ್ ಸೌಲಭ್ಯಗಳು ಲಭ್ಯವಿಲ್ಲದ ದೂರದ ಪ್ರದೇಶಗಳಲ್ಲಿ ಈ D2D ತಂತ್ರಜ್ಞಾನವು ತೊಂದರೆ-ಮುಕ್ತ ಸಂಪರ್ಕವನ್ನು ಒದಗಿಸುತ್ತದೆ. ಈ ಉಪಗ್ರಹ ಸಂವಹನದ ಭಾಗವಾಗಿರುವ ಸಾಧನಕ್ಕೆ ನೇರ ಸೇವೆಗಳು ಇನ್ನು ಮುಂದೆ ಮೊಬೈಲ್ ಟವರ್‌ಗಳೊಂದಿಗೆ ಕಾರ್ಯನಿರ್ವಹಿಸುವುದಿಲ್ಲ. ನೇರವಾಗಿ ಹೇಳೋದಾದ್ರೆ ಇನ್ಮುಂದೆ ನಿಮ್ಮ ಪೋನ್‌ಗಳು ಈ ತಂತ್ರಜ್ಞಾನದ ಮೂಲಕ ಸ್ಯಾಟಲೈಟ್ ಫೋನ್‌ಗಳಂತೆ ಕಾರ್ಯನಿರ್ವಹಿಸಲಿದೆ.

D2D ತಂತ್ರಜ್ಞಾನದ ಪ್ರಯೋಜನ

  • ಸಾಂಪ್ರದಾಯಿಕ ಇಂಟರ್ನೆಟ್ ಮೂಲಸೌಕರ್ಯಗಳು ಲಭ್ಯವಿಲ್ಲದ ದೂರದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇದು ಸಂಪರ್ಕವನ್ನು ಒದಗಿಸುತ್ತದೆ. ದೂರದ ಪ್ರದೇಶಗಳಿಗೆ ವಿಶೇಷವಾಗಿ ಉಪಯುಕ್ತವಾಗಿದೆ.
  • ಮೊಬೈಲ್ ನಲ್ಲಿ ಸಿಮ್ ಕಾರ್ಡ್ ಇಲ್ಲದೇ ನಿರಂತರ ಕರೆ ಮಾಡಲು ಸಾಧ್ಯವಿದೆ.
  • ಸ್ಮಾರ್ಟ್ ವಾಚ್‌ಗಳು, ಇಂಟರ್ನೆಟ್ ಹೊಂದಿರುವ ಕಾರುಗಳು, ಟ್ಯಾಬ್, ಲ್ಯಾಪ್‌ಟಾಪ್ ಸಿಮ್ ಕಾರ್ಡ್ ಇಲ್ಲದೆಯೇ ಕರೆಗಳನ್ನು ಮಾಡಬಹುದು, ಇದು ವೈಯಕ್ತಿಕ ಮತ್ತು ಸಾಧನ ಸಂವಹನವನ್ನು ಬೆಂಬಲಿಸಲು ವಿನ್ಯಾಸ ಗೊಳಿಸಲಾಗಿದೆ.
  • ಬಳಕೆದಾರರು ತಮ್ಮ ಸ್ಥಳವನ್ನು ಲೆಕ್ಕಿಸದೆ ಇಂಟರ್ನೆಟ್ ಸೇವೆಗಳು ಮತ್ತು ಸಂವಹನ ಸಾಧನಗಳನ್ನು ಪ್ರವೇಶಿಸಬಹುದು.
  • ಸಾಂಪ್ರದಾಯಿಕ ಉಪಗ್ರಹ ಸಂವಹನ ವಿಧಾನಗಳಿಗೆ ಹೋಲಿಸಿದರೆ ಇದು ಕಡಿಮೆ ಸುಪ್ತತೆಯೊಂದಿಗೆ ವೇಗವಾದ ಡೇಟಾ ಪ್ರಸರಣವನ್ನು ಬೆಂಬಲಿಸುತ್ತದೆ.
  • ಲಭ್ಯವಿರುವ ಸ್ಪೆಕ್ಟ್ರಮ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಇದು ಸಹಾಯ ಮಾಡುತ್ತದೆ. ಒಟ್ಟಾರೆ ನೆಟ್‌ವರ್ಕ್ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.
  • ಹೆಚ್ಚುವರಿ ಯಂತ್ರಾಂಶದ ಅಗತ್ಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಸಂಪರ್ಕಕ್ಕಾಗಿ ಹೆಚ್ಚು ವೆಚ್ಚದಾಯಕ ಪರಿಹಾರವಾಗಿದೆ.
  • ಈ ತಂತ್ರಜ್ಞಾನವನ್ನು ತುರ್ತು ಸೇವೆಗಳು, ಸಮುದ್ರಯಾನ ಮತ್ತು ವಾಯುಯಾನದಲ್ಲಿಯೂ ಬಳಕೆ ಮಾಡಬಹುದಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page