Search
WhatsApp alerts

Home › Business

Budget 2025: ತೆರಿಗೆ ವಿನಾಯ್ತಿ ಮತ್ತು ಅನೇಕ ಸೌಲಭ್ಯಗಳೊಂದಿಗೆ Budget ಘೋಷಣೆ

administrator · Published

Budget 2025

Bengaluru: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025ನೇ ಸಾಲಿನ ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಈ ಬಜೆಟ್‌ನ (Budget) ಮೂಲಕ ಮಧ್ಯಮ ವರ್ಗದವರು ಮತ್ತು ವೇತನದಾರರಿಗೆ ಸಿಹಿ ಸುದ್ದಿಯನ್ನು ಘೋಷಣೆ ಮಾಡಲಾಗಿದ್ದು, 12 ಲಕ್ಷ ರೂ.ವರೆಗೆ ಆದಾಯ ಹೊಂದಿದವರಿಗೆ ತೆರಿಗೆ ವಿನಾಯ್ತಿ ನೀಡಲಾಗಿದೆ.

ಹಿರಿಯ ನಾಗರಿಕರಿಗೆ 50 ಸಾವಿರ ರೂ.ದಿಂದ 1 ಲಕ್ಷ ರೂ.ವರೆಗೆ ತೆರಿಗೆ ವಿನಾಯ್ತಿಯನ್ನು ನೀಡಲಾಗಿದೆ. ಹೊಸ ತೆರಿಗೆ ಪದ್ಧತಿಯಲ್ಲಿ 12 ಲಕ್ಷ ರೂ.ವರೆಗೆ ಆದಾಯ ಹೊಂದಿದವರು ಯಾವುದೇ ತೆರಿಗೆ ಪಾವತಿಸಬೇಕಾಗುವುದಿಲ್ಲ.

ತೆರಿಗೆ ವಿನಾಯ್ತಿ ವಿವರಗಳು

  • 0-4 ಲಕ್ಷ ರೂ. ಆದಾಯ: 0%
  • 4-8 ಲಕ್ಷ ರೂ. ಆದಾಯ: 5%
  • 8-12 ಲಕ್ಷ ರೂ. ಆದಾಯ: 10%
  • 12-16 ಲಕ್ಷ ರೂ. ಆದಾಯ: 15%
  • 16-20 ಲಕ್ಷ ರೂ. ಆದಾಯ: 20%
  • 20-24 ಲಕ್ಷ ರೂ. ಆದಾಯ: 25%
  • 24 ಲಕ್ಷ ರೂ. ಮೇಲೆ ಆದಾಯ: 30%

ವಸ್ತುಗಳ ಬೆಲೆ ಇಳಿಕೆ

  • ಸ್ವದೇಶಿ ಬಟ್ಟೆಗಳು
  • ಎಲೆಕ್ಟ್ರಿಕ್ ಕಾರುಗಳು
  • ಚರ್ಮದ ಉತ್ಪನ್ನಗಳು
  • ಎಲ್‌ಇಡಿ ಟಿವಿಗಳು
  • ಮೊಬೈಲ್ ಹಾಗೂ ಮೊಬೈಲ್ ಭಾಗಗಳು
  • ಕ್ಯಾನ್ಸರ್ ಔಷಧಿಗಳು

ಈ ಬಜೆಟ್‌ನ ಮೂಲಕ ದೇಶದ ಜನತೆಯ ಬೇಡಿಕೆಯಂತೆ ತೆರಿಗೆ ವಿನಾಯಿತಿಯನ್ನು ಘೋಷಣೆ ಮಾಡುವುದರಿಂದ ಮಧ್ಯಮ ವರ್ಗದವರು ಹರ್ಷಗೊಂಡಿದ್ದಾರೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page