ನವದೆಹಲಿ: ಈ ಬಾರಿ ಬಜೆಟ್‌ನಲ್ಲಿ (Budget) ಮಧ್ಯಮ ವರ್ಗದವರಿಗೆ ತೆರಿಗೆ ಕಡಿತ ಮಾಡಲಾಗುವ ಸಾಧ್ಯತೆ ಇದೆ. ರಾಯ್ಟರ್ಸ್ ವರದಿ ಪ್ರಕಾರ, ಫೆಬ್ರವರಿಯ ಬಜೆಟ್‌ನಲ್ಲಿ 15 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ದರದಲ್ಲಿ ಇಳಿಕೆ ಆಗಬಹುದು ಎಂದು two sources government ಮೂಲಗಳು ತಿಳಿಸಿವೆ. ಆದರೆ ತೆರಿಗೆ ಇಳಿಕೆ ಪ್ರಮಾಣದ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲ.
ಸದ್ಯಕ್ಕೆ ಎರಡು ತೆರಿಗೆ ಪದ್ಧತಿಗಳು ಜಾರಿಯಲ್ಲಿವೆ
ಹಳೆಯ ತೆರಿಗೆ ಪದ್ದತಿ: ಹಲವು ತೆರಿಗೆ ವಿನಾಯಿತಿಗಳು ಮತ್ತು ರಿಯಾಯಿತಿಗಳು ಲಭ್ಯ. ಹೆಚ್ಚಿನವರು ಈ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.
ಹೊಸ ತೆರಿಗೆ ಪದ್ದತಿ (2020): ಕಡಿಮೆ ತೆರಿಗೆ ದರಗಳು, ಆದರೆ ಕಡಿಮೆ ವಿನಾಯಿತಿಗಳು.
ಸರ್ಕಾರ ಹೊಸ ಟ್ಯಾಕ್ಸ್ ಸಿಸ್ಟಂ ಅನ್ನು ಹೆಚ್ಚು ಜನರು ಬಳಸುವಂತೆ ಮಾಡಲು ತೆರಿಗೆ ದರಗಳನ್ನು ಇನ್ನಷ್ಟು ಕಡಿಮೆ ಮಾಡಲು ಯೋಚಿಸುತ್ತಿದೆ.
ಹಳೆಯ ಪದ್ದತಿ
₹2.5 ಲಕ್ಷ ವರೆಗಿನ ಆದಾಯ – ತೆರಿಗೆ ವಿನಾಯಿತಿ
₹2.5 ಲಕ್ಷ – ₹5 ಲಕ್ಷ: 5% ತೆರಿಗೆ
₹5 ಲಕ್ಷ – ₹10 ಲಕ್ಷ: 20% ತೆರಿಗೆ
₹10 ಲಕ್ಷ ಮೇಲ್ಪಟ್ಟ ಆದಾಯ: 30% ತೆರಿಗೆ
ಆಕರ್ಷಣೆ: ₹3 ಲಕ್ಷವರೆಗೆ ಅತ್ಯಂತ ಹೆಚ್ಚು ಡಿಡಕ್ಷನ್ ಲಭ್ಯ.
ಹೊಸ ಪದ್ದತಿ
- ₹3 ಲಕ್ಷ ವರೆಗಿನ ಆದಾಯ – ತೆರಿಗೆ ವಿನಾಯಿತಿ
- ₹3 ಲಕ್ಷ – ₹7 ಲಕ್ಷ: 5% ತೆರಿಗೆ
- ₹7 ಲಕ್ಷ – ₹10 ಲಕ್ಷ: 10% ತೆರಿಗೆ
- ₹10 ಲಕ್ಷ – ₹12 ಲಕ್ಷ: 15% ತೆರಿಗೆ
- ₹12 ಲಕ್ಷ ಮೇಲ್ಪಟ್ಟ ಆದಾಯ: 30% ತೆರಿಗೆ
- ಸೌಲಭ್ಯ: ₹7 ಲಕ್ಷ ಒಳಗಿನ ಆದಾಯಕ್ಕೆ ತೆರಿಗೆ ರಿಬೇಟ್ (ಯಾವುದೇ ತೆರಿಗೆ ಇಲ್ಲ).
2025 ಬಜೆಟ್ ಕುರಿತು ಇನ್ನಷ್ಟು ವಿವರಗಳು ಫೆಬ್ರುವರಿ ತಿಂಗಳಲ್ಲಿ ಹೊರಬರುವ ನಿರೀಕ್ಷೆಯಿದೆ.