ಧರ್ಮಸ್ಥಳದ (Dharmasthala) ವಿವಿಧ ಕಡೆಗಳಲ್ಲಿ ನೂರಾರು ಶವಗಳನ್ನು ಹೂತಿದ್ದಾರೆ ಎಂಬ ಅನಾಮಿಕ ದೂರು ಆಧರಿಸಿ ಎಸ್ಐಟಿ ತನಿಖೆ ನಡೆಯುತ್ತಿದೆ. ಉತ್ಖನನವೂ ಪ್ರಾರಂಭವಾಗಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ (RTI) ದೊರೆತ ಮಾಹಿತಿಯ ಪ್ರಕಾರ, 1987 ರಿಂದ 2025ರವರೆಗೆ ಧರ್ಮಸ್ಥಳ ಪ್ರದೇಶದಲ್ಲಿ ಒಟ್ಟು 279 ಶವಗಳನ್ನು ಹೂಳಲಾಗಿದೆ. ಇದರಲ್ಲಿ ಶಿಶುಗಳ ಶವಗಳೂ ಸೇರಿವೆ. ಹೆಚ್ಚಿನ ಸಾವುಗಳು ಆತ್ಮಹತ್ಯೆ ಪ್ರಕರಣಗಳಾಗಿವೆ.
ಶವಗಳ ವಿವರ
- ಒಟ್ಟು 279 ಅನಾಥ ಶವಗಳಲ್ಲಿ,
- 219 ಪುರುಷರ ಶವಗಳು
- 46 ಮಹಿಳೆಯರ ಶವಗಳು
- 14 ಶವಗಳ ಲಿಂಗ ಗುರುತು ಪತ್ತೆಯಾಗಿಲ್ಲ
- ಈ ಮಾಹಿತಿ ಧರ್ಮಸ್ಥಳ ಗ್ರಾಮ ಪಂಚಾಯಿತಿ ಪಿಐಒ ಕಚೇರಿಯಿಂದ ಲಭ್ಯವಾಗಿದೆ.
ವರ್ಷವಾರು ಹೂಳಿದ ಶವಗಳು
- 2003-04, 2006-07 ಮತ್ತು 2014-15ರಲ್ಲಿ 17 ಶವಗಳು
- ಕಳೆದ 10 ವರ್ಷಗಳಲ್ಲಿ ಮಾತ್ರ 101 ಶವಗಳು
ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರೊಬ್ಬರು, ಹೆಚ್ಚಿನ ಶವಗಳು ಕಾಡಿನೊಳಗೆ ಪತ್ತೆಯಾಗಿದ್ದವು ಎಂದು ತಿಳಿಸಿದ್ದಾರೆ.
ಶವಗಳು ಕೊಳೆತು ದುರ್ವಾಸನೆ ಬರುತ್ತಿದ್ದ ಕಾರಣ ಅವುಗಳನ್ನು ತಕ್ಷಣ ಅಲ್ಲೇ ಹೂಳಲಾಗುತ್ತಿತ್ತು ಎಂಬ ಮಾಹಿತಿ ಬಂದಿದೆ.
ಪ್ರಕರಣ ತನಿಖೆ ಪ್ರಗತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಉತ್ಖನನ ನಡೆಯುತ್ತಿದ್ದರೂ, ಇಂದು ಶೋಧ ಕಾರ್ಯ ನಡೆಸದೇ ಇರಲು ಎಸ್ಐಟಿ ನಿರ್ಧರಿಸಿದೆ. ದೂರು ನೀಡಿದ ಅನಾಮಿಕ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗುತ್ತಿದೆ.
For Daily Updates WhatsApp ‘HI’ to 7406303366
ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಕೂಡ ಸಿಕ್ಕಿದೆ. ಬಿಜೆಪಿ ‘ಧರ್ಮಸ್ಥಳ ಚಲೋ’ ಯಾತ್ರೆ ಘೋಷಿಸಿದೆ. ತನಿಖೆಯ ಹೆಸರಿನಲ್ಲಿ ವಿಳಂಬ ಮಾಡದೆ ಧರ್ಮಸ್ಥಳ ಕ್ಷೇತ್ರದ ಗೌರವವನ್ನು ಕಾಪಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.