ಸಾರಾಯಿ ಸೀಸೆಯಲ್ಲಿ ದೇವಿಯನ್ನು ಕಾಣುವವರಿದ್ದಾರಂತೆ! ಹಲವರಿಗೆ ಮದ್ಯ ಖರೀದಿ ಮಾಡುವುದು ಕಷ್ಟ. ಆದರೆ, ವಿದೇಶಿ ಬ್ರ್ಯಾಂಡ್ ಅರ್ಧ ಬೆಲೆಗೆ ಸಿಕ್ಕರೆ? ಬಿಯರ್ ಅಥವಾ ಲಿಕ್ಕರ್ ಮೇಲೆ ‘Buy One Get One’ ಆಫರ್ ಸಿಕ್ಕರೆ? ಉತ್ತರ ಪ್ರದೇಶದಲ್ಲಿ (Uttar Prades) ಇದೇ ಸನ್ನಿವೇಶ. ಮದ್ಯದ ಅಂಗಡಿಗಳ ಮುಂದೆ ಜನಜಾತ್ರೆ.
ನೋಯಿಡಾದಲ್ಲಿ ಪ್ರತಿದಿನ 10,000 ಬಿಯರ್ ಬಾಟಲಿ, 30,000 ಲಿಕ್ಕರ್ ಬಾಟಲಿ, 40,000 ಕಂಟ್ರಿ ಲಿಕ್ಕರ್ ಬಾಟಲಿ ಮಾರಾಟವಾಗುತ್ತಿವೆ. ಇದರಿಂದ ದಿನಕ್ಕೆ 3-4 ಕೋಟಿ ರೂಪಾಯಿ ಆದಾಯವಾಗುತ್ತಿದೆ. ಈಗ ಇರುವ ಆಫರ್‌ನಿಂದ ಮಾರಾಟ 30-40% ಹೆಚ್ಚಾಗಲಿದೆ.
ಮಾರ್ಚ್ 31, 2025ರ ಒಳಗೆ ಹಳೆಯ ಸ್ಟಾಕ್ ಕ್ಲಿಯರ್ ಮಾಡಬೇಕಾಗಿದೆ. ಏಪ್ರಿಲ್ 1ರಿಂದ ಹೊಸ ಅಬಕಾರಿ ನೀತಿ ಜಾರಿಯಾಗಲಿದ್ದು, ಇ-ಲಾಟರಿ ಮೂಲಕ ಮದ್ಯದ ಅಂಗಡಿಗಳನ್ನು ಹಂಚಲಾಗುತ್ತದೆ. ಹೀಗಾಗಿ ಅಂಗಡಿಗಳು ಶೇ.50 ರಿಯಾಯಿತಿ ಕೊಟ್ಟು ಮಾರಾಟ ಮಾಡುತ್ತಿದ್ದಾರೆ.
ಈ ಆಫರ್ ಗೊತ್ತಾಗಿ ಮದ್ಯ ಪ್ರಿಯರು ಅಂಗಡಿಗಳತ್ತ ಓಡಿದ್ರು. ಜನಸಂದಣಿಯಿಂದ ಮುಜಾಫರ್ನಗರ, ಹಾಪುರ ಪ್ರದೇಶಗಳಲ್ಲಿ ಪೊಲೀಸರ ನಿಯಂತ್ರಣ ಅವಶ್ಯಕವಾಯಿತು. ಉತ್ತರ ಪ್ರದೇಶದ ಜನರಿಗೆ ಇದೊಂದು ಸಿಹಿಸುದ್ದಿ, ಆದರೆ ಪೊಲೀಸರಿಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ!