ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿವಿಧ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಈ ಸಮಯದಲ್ಲಿ, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ಯಾನ್ 2.0 ಯೋಜನೆಗೆ (PAN 2.0 project) ಅನುಮೋದನೆ ನೀಡಿದರು. ಸುಮಾರು 1,435 ಕೋಟಿ ರೂ. ವೆಚ್ಚದ ಈ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ಯೋಜನೆಯ ಮೂಲಕ ಪ್ಯಾನ್ ಕಾರ್ಡ್‌ಗಳಿಗೆ ಉಚಿತವಾಗಿ ಕ್ಯೂಆರ್ ಕೋಡ್ (QR code) ಅಪ್‌ಗ್ರೆಡ್ ಮಾಡಲಾಗುವುದು ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಈ ಯೋಜನೆಗೆ ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯಿಂದ ಅನುಮೋದನೆ ದೊರಕಿದೆ.
ಈ ಯೋಜನೆ ಇದೀಗ ಒಂದೇ ಪೋರ್ಟಲ್ ಮೂಲಕ ಕಾರ್ಯನಿರ್ವಹಿಸಲಿದ್ದು, ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗುತ್ತದೆ. ಇದರ ಮೂಲಕ, ಕುಂದುಕೊರತೆ ಪರಿಹಾರ ವ್ಯವಸ್ಥೆಯ ಮೇಲೆ ಗಮನ ಹರಿಸಲಾಗುತ್ತದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಪ್ಯಾನ್ 2.0 ಯೋಜನೆ ಎಂದರೇನು?
ಪ್ಯಾನ್ 2.0 ಯೋಜನೆ, ತೆರಿಗೆದಾರರ ಅನುಭವವನ್ನು ಡಿಜಿಟಲ್ ರೂಪದಲ್ಲಿ ಸುಧಾರಿಸುವ ಉದ್ದೇಶದಿಂದ ತೆರಿಗೆದಾರರ ನೋಂದಣಿ ಪ್ರಕ್ರಿಯೆಗಳನ್ನು ತಂತ್ರಜ್ಞಾನ-ಚಾಲಿತವಾಗಿ ಪರಿವರ್ತಿಸಲು ವಿನ್ಯಾಸಗೊಳಿಸಲಾಗಿದೆ. ಇದು PAN/TAN 1.0 ವ್ಯವಸ್ಥೆಯ ಅಪ್‌ಗ್ರೆಡ್ ಆಗಿದ್ದು, PAN/TAN ಸೇವೆಗಳ ಮತ್ತು PAN ಮೌಲ್ಯೀಕರಣ ಸೇವೆಯ ಏಕೀಕರಣವನ್ನು ಸಾಧಿಸುತ್ತದೆ.
ಯೋಜನೆಯ ಪ್ರಯೋಜನಗಳು
- ಸುಧಾರಿತ ಗುಣಮಟ್ಟ ಮತ್ತು ವೇಗದ ಸೇವೆ ವಿತರಣೆ
- ಸತ್ಯದ ಏಕ ಮೂಲ ಮತ್ತು ಡೇಟಾ ಸ್ಥಿರತೆ
- ಪರಿಸರ ಸ್ನೇಹಿ ಪ್ರಕ್ರಿಯೆಗಳು ಮತ್ತು ವೆಚ್ಚ ಆಪ್ಟಿಮೈಸೇಶನ್ (optimization)
- ವೇಗದ ಕಾರ್ಯಕ್ಷಮತೆಯ ಭದ್ರತೆ ಮತ್ತು ಆಪ್ಟಿಮೈಸೇಶನ್
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರ ಪ್ರಕಾರ, 78 ಕೋಟಿ ಪ್ಯಾನ್ ಕಾರ್ಡ್‌ಗಳನ್ನು ಈಗಾಗಲೇ ಜನರಿಗೆ ವಿತರಿಸಲಾಗಿದೆ, ಮತ್ತು 98% ಜನರು ಇದನ್ನು ಬಳಸುತ್ತಿದ್ದಾರೆ. ಹೊಸ ಯೋಜನೆಯು ಈಗಾಗಲೇ ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಅಪ್‌ಗ್ರೆಡ್ ಮಾಡುತ್ತದೆ.