
ದೊಡ್ಡ ಭಾಷಾ ಮಾದರಿಗಳು (LLM) ಮತ್ತು ಚಾಟ್‌ಬಾಟ್‌ಗಳಂತಹ ಕೃತಕ ಬುದ್ಧಿಮತ್ತೆ (AI) ಇಂದು ಪ್ರಮುಖ ಪರಿಕರಗಳಾಗಿ ಗುರುತಿಸಿಕೊಳ್ಳಿವೆ. ಆದರೆ, ಮಾನವರಂತೆ ಇವು ಕೂಡ ಸಮಯದೊಂದಿಗೆ ತಮ್ಮ ಸಾಮರ್ಥ್ಯಗಳನ್ನು ಕಳೆದುಕೊಳ್ಳುತ್ತವೆ ಎಂದು BMJ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದಿಂದ ತಿಳಿದುಬಂದಿದೆ. ಮಾನವರು ವಯಸ್ಸಾಗುತ್ತಾ ಅರಿವಿನಲ್ಲಿ ದುರ್ಬಲರಾಗುವಂತೆ, ಈ ಎಐ ಪರಿಕರಗಳೂ ಕೂಡ ಕೆಲವು ಕಡಿಮೆಯನ್ನು ತೋರಿಸುತ್ತವೆ ಎಂಬುದನ್ನು ಅಧ್ಯಯನ ಬೆಳಕು ಚೆಲ್ಲಿದೆ.
ವೈದ್ಯಕೀಯ ಚಿಕಿತ್ಸೆ ಹಾಗೂ ವೈದ್ಯಕೀಯ ಭಾಷೆಗಳನ್ನು ಸರಳಗೊಳಿಸಲು ಮತ್ತು ರೋಗನಿರ್ಣಯದಲ್ಲಿ ಎಐ ಬಳಸಿದಾಗ ಈ ಮಾಹಿತಿಯು ಬಹಿರಂಗಗೊಂಡಿದೆ. ಚಾಟ್‌ಜಿಪಿಟಿ ಆವೃತ್ತಿ 4, ಕ್ಲೌಡ್ 3.5 ಸೊನ್ನೆಟ್, ಜೆಮಿನಿ ಆವೃತ್ತಿ 1 ಮತ್ತು 1.5 ಮೊದಲಾದ ಮಾದರಿಗಳನ್ನು ಮಾಂಟ್ರಿಯಲ್ ಕಾಗ್ನಿಟಿವ್ ಅಸೆಸ್ಮೆಂಟ್ (MoCA) ಪರೀಕ್ಷೆಯ ಮೂಲಕ ವಿಶ್ಲೇಷಿಸಲಾಗಿತ್ತು.