
ಕೆನಡಾದಿಂದ (Canada) ಭಾರತಕ್ಕೆ ಬರುವ ಪ್ರಯಾಣಿಕರಿಗೆ ವಿಧಿಸಿದ್ದ ಹೆಚ್ಚಿನ ಭದ್ರತಾ ಸ್ಕ್ರೀನಿಂಗ್ (security screening) ಅನ್ನು ರದ್ದುಪಡಿಸಿದೆ. ಫೆಡರಲ್ ಸಾರಿಗೆ ಸಚಿವೆ ಅನಿತಾ ಆನಂದ್ ಈ ಕುರಿತು ಪ್ರಕಟಣೆ ನೀಡಿದರು.
ಅಕ್ಟೋಬರ್ ತಿಂಗಳಲ್ಲಿ ನವದೆಹಲಿಯಿಂದ ಚಿಕಾಗೋಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಬೆದರಿಕೆ ಉಂಟಾದ ಹಿನ್ನಲೆಯಲ್ಲಿ ಈ ಕ್ರಮಗಳನ್ನು ಜಾರಿಗೊಳಿಸಲಾಗಿತ್ತು. ವಿಮಾನವನ್ನು ತುರ್ತುಭಾವದಿಂದ ಕೆನಡಾದ ಇಕಾಲುಯಿಟ್ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು ಮತ್ತು ತಪಾಸಣೆಯ ನಂತರ ಯಾವುದೇ ಸ್ಫೋಟಕ ಸಾಧನ ಪತ್ತೆಯಾಗಿರಲಿಲ್ಲ.
ಹೆಚ್ಚುವರಿ ಸ್ಕ್ರೀನಿಂಗ್ ಒಳಗೊಂಡು hand bags ಎಕ್ಸ್-ರೇ ತಪಾಸಣೆ, ಪ್ರಯಾಣಿಕರ ದೇಹದ ಪರಿಶೀಲನೆ, ಮತ್ತು ಲಗೇಜ್ ಪರಿಶೀಲನೆ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈ ಕ್ರಮಗಳಿಂದ ಪ್ರಯಾಣಿಕರು ವಿಳಂಬಗಳನ್ನು ಅನುಭವಿಸಿದ್ದರು.
2023ರಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ಬಗ್ಗೆ ಭಾರತ ಸರ್ಕಾರದ ಹಸ್ತಕ್ಷೇಪ ಕುರಿತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ತೀವ್ರ ಆರೋಪ ಮಾಡಿದ್ದರು. ಇದರಿಂದ ಭಾರತ-ಕೆನಡಾ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟವು.
ಕೆನಡಾ ಸರ್ಕಾರವು ಭಾರತ ಸರ್ಕಾರದ ವಿರುದ್ಧದ ತನ್ನ ಅಂತಿಮ ಸ್ಪಷ್ಟೀಕರಣವನ್ನು ನೀಡಿದ್ದು, ಮಾಧ್ಯಮ ವರದಿಗಳನ್ನು ತಪ್ಪು ಅಂಶಗಳ ಮೇಲೆ ಆಧಾರಿತ ಎಂದು ವಿವರಿಸಿದೆ. ಈ ಮೂಲಕ, ಹೊಸ ಕ್ರಮದಿಂದ ಭಾರತೀಯ ಪ್ರಯಾಣಿಕರಿಗೆ ಸುಗಮವಾದ ಪ್ರಯಾಣ ಸಾಧ್ಯವಾಗಿದೆ.