
Bogotá: ಕೊಲಂಬಿಯಾದಲ್ಲಿ (Colombia) ನಡೆದ ಎರಡು ಭಯೋತ್ಪಾದಕ ದಾಳಿಗಳಲ್ಲಿ ಕನಿಷ್ಠ 13 ಜನರು ಮೃತಪಟ್ಟಿದ್ದಾರೆ.
ಮೊದಲ ಘಟನೆದಲ್ಲಿ, ಪೊಲೀಸ್ ಹೆಲಿಕಾಪ್ಟರ್ ಮೇಲೆ ನಡೆದ ದಾಳಿಯಿಂದ 8 ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಈ ಹೆಲಿಕಾಪ್ಟರ್ ಕೋಕಾ ಎಲೆ ಬೆಳೆಗಳನ್ನು ನಾಶಮಾಡಲು ಉತ್ತರ ಕೊಲಂಬಿಯಾದ ಆಂಟಿಯೋಕ್ವಿಯಾ ಪ್ರದೇಶಕ್ಕೆ ತೆರಳುತ್ತಿತ್ತು. ದಾಳಿಯಿಂದ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ.
ಇನ್ನೊಂದು ಘಟನೆ ಕ್ಯಾಲಿ ನಗರದಲ್ಲಿ ನಡೆದಿದೆ. ಮಿಲಿಟರಿ ವಾಯುಯಾನ ಶಾಲೆಯ ಬಳಿ ಸ್ಫೋಟಕಗಳಿಂದ ತುಂಬಿದ ಕಾರು ಸ್ಫೋಟಗೊಂಡು 5 ಜನರು ಸಾವನ್ನಪ್ಪಿದ್ದಾರೆ. 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಅಧ್ಯಕ್ಷ ಗುಸ್ಟಾವೊ ಪೆಟ್ರೋ, ಈ ದಾಳಿಗಳಿಗೆ FARC ಭಿನ್ನಮತೀಯರು ಮತ್ತು ಗಲ್ಫ್ ಕ್ಲಾನ್ ಎಂಬ ಡ್ರಗ್ ಕಾರ್ಟೆಲ್ ಹೊಣೆಗಾರರು ಎಂದು ಆರೋಪಿಸಿದ್ದಾರೆ. ಇವರು ಕೊಕೇನ್ ವಶಪಡಿಸಿಕೊಂಡಿದ್ದಕ್ಕೆ ಪ್ರತೀಕಾರವಾಗಿ ದಾಳಿ ನಡೆಸಿದರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಲಂಬಿಯಾದಲ್ಲಿ ಕೋಕಾ ಎಲೆ ಬೆಳೆ ಹೆಚ್ಚಾಗುತ್ತಿದೆ. 2023ರಲ್ಲಿ ಇದಕ್ಕೆ 2.53 ಲಕ್ಷ ಹೆಕ್ಟೇರ್ ಪ್ರದೇಶ ಬಳಸಲಾಗಿದೆ ಎಂದು ಯುಎನ್ ವರದಿ ಹೇಳಿದೆ.