Home Auto Car 2025 ರಿಂದ ಕಾರುಗಳ ಬೆಲೆ ಏರಿಕೆಗೆ TATA, Maruti, Mahindra ಪ್ಲಾನ್

2025 ರಿಂದ ಕಾರುಗಳ ಬೆಲೆ ಏರಿಕೆಗೆ TATA, Maruti, Mahindra ಪ್ಲಾನ್

253
Tata Motors

ಟಾಟಾ ಮೋಟಾರ್ಸ್ (Tata Motors) ಜನವರಿ 2025ರಿಂದ ಎಲ್ಲಾ ಕಾರುಗಳ ಬೆಲೆಗಳನ್ನು ಶೇಕಡಾ 3 ರಷ್ಟು ಹೆಚ್ಚಿಸಲಿದೆ. ಇದರಲ್ಲಿ ಎಲೆಕ್ಟ್ರಿಕ್ ಕಾರುಗಳು ಕೂಡ ಸೇರಿವೆ. ಹೆಚ್ಚಿನ ಬೆಲೆ ಏರಿಕೆಗೆ ಕಾರಣವಾಗಿ, ಹಣದುಬ್ಬರ ಮತ್ತು ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳನ್ನು ಸರಿದೂಗಿಸಲು ಈ ಅವಶ್ಯಕತೆ ಹುಟ್ಟಿದೆಯೆಂದು ಕಂಪನಿ ಹೇಳಿದೆ.

ಹೊಸ ವರ್ಷದಂದು ನೀವು ಟಾಟಾ ನೆಕ್ಸಾನ್ ಅಥವಾ ಇನ್ನಾವುದೇ ಟಾಟಾ ಕಾರನ್ನು ಖರೀದಿಸಲು ಯೋಚಿಸುತ್ತಿದ್ದರೆ, ಈಗಿರುವುದಕ್ಕಿಂತ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ.

  • ಮಾರುತಿ ಸುಜುಕಿ: ಮಾರುತಿ, ತನ್ನ ಕಾರುಗಳ ಬೆಲೆಯನ್ನು ಜನವರಿ 2025 ರಿಂದ ಶೇಕಡಾ 4 ರಷ್ಟು ಹೆಚ್ಚಿಸಲಿದೆ.
  • ಹುಂಡೈ: ಹುಂಡೈ 2025 ರಿಂದ 25,000 ರೂಪಾಯಿ ಹೆಚ್ಚಳವನ್ನು ಘೋಷಿಸಿದೆ, ದಕ್ಷಿಣ ಕೊರಿಯಾದ ಕಾರು ಕಂಪನಿಯು ನಿಗದಿತ ಮೊತ್ತ ಅಥವಾ ಶೇಕಡಾವಾರು ಬಗ್ಗೆ ಸ್ಪಷ್ಟಪಡಿಸಿಲ್ಲ.
  • ಮಹೀಂದ್ರ: ಮಹೀಂದ್ರ ತನ್ನ ಎಸ್‌ಯುವಿಗಳ ಬೆಲೆಯನ್ನು 2025 ರಲ್ಲಿ 3% ಹೆಚ್ಚಿಸಲಿದೆ. ಥಾರ್, XUV700, ಸ್ಕಾರ್ಪಿಯೋ ಮತ್ತು ಇತರ ಮಾದರಿಗಳ ಬೆಲೆ ಏರಿಕೆ ಆಗಲಿದೆ.
  • JSW MG ಮೋಟಾರ್: JSW MG ಮೋಟಾರ್ 2025ರಿಂದ ತನ್ನ ಕಾರುಗಳ ಬೆಲೆಯನ್ನು ಶೇಕಡಾ 3 ರಷ್ಟು ಹೆಚ್ಚಿಸಲಿದೆ.
  • ಐಷಾರಾಮಿ ಕಾರುಗಳ ಬೆಲೆ ಏರಿಕೆ: ಮರ್ಸಿಡೀಸ್-ಬೆನ್ಜ್, BMW ಮತ್ತು ಆಡೀ (Mercedes-Benz, BMW and Audi) ಕಾರುಗಳು 2025ರಿಂದ ಶೇಕಡಾ 3 ರಷ್ಟು ದುಬಾರಿ ಆಗಲಿವೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page