ಭಾರತದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಲಂಚ (government officials in India) ನೀಡಿದ ಉದ್ಯಮಿಗಳ ಪ್ರಮಾಣ ಶೇ. 66 ಆಗಿದ್ದು, ಇತ್ತೀಚೆಗೆ ಲಂಚ ನೀಡಿದುದಾಗಿ ಸಮೀಕ್ಷೆಯಲ್ಲಿ ಬಹುಮಟ್ಟಿಗೆ ಹೇಳಲಾಗಿದೆ.
ಲೋಕಲ್ಸರ್ಕಲ್ಸ್ ಸಂಸ್ಥೆ (LocalCircles survey report) 159 ಜಿಲ್ಲೆಗಳಲ್ಲಿ 18,000 ಜನರನ್ನು ಸಮೀಕ್ಷೆ ಮಾಡಿದ್ದು, ಇದರಲ್ಲಿ ಶೇ. 54ರಷ್ಟು ಉದ್ಯಮಿಗಳು ಬಲವಂತವಾಗಿ ಲಂಚ ನೀಡಬೇಕಾದ ಅನುಭವವನ್ನು ಹೇಳಿಕೊಂಡಿದ್ದಾರೆ.
ಪರಿಶೀಲನೆ ವಿವರಗಳು
- ಶೇ. 66ರಷ್ಟು ಉದ್ಯಮಿಗಳು ಕಳೆದ 12 ತಿಂಗಳಲ್ಲಿ ಕನಿಷ್ಠ ಒಂದು ಬಾರಿಯಾದರೂ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ.
- ಶೇ. 54ರಷ್ಟುವರು ಬಲವಂತವಾಗಿ ಲಂಚ ನೀಡಿದರೆ, ಶೇ. 46ರಷ್ಟು ಇತರರು ಕೆಲಸವನ್ನು ಸುಲಭವಾಗಿ ಮಾಡಿಸಿಕೊಳ್ಳಲು ಲಂಚ ನೀಡಿದ್ದಾರೆ.
- ಶೇ. 16ರಷ್ಟು ಉದ್ಯಮಿಗಳು ಲಂಚ ನೀಡದೇ ಕೆಲಸ ಮಾಡಿದ್ದರೆ, ಶೇ. 19ರಷ್ಟು ಇತರರು ಲಂಚ ನೀಡುವ ಸಂದರ್ಭವೇ ಬಂದಿಲ್ಲ ಎಂದು ಹೇಳಿದ್ದಾರೆ.
‘ಸರ್ಕಾರಿ ಕಚೇರಿಗಳಲ್ಲಿ ಉದ್ದಿಮೆಗಳಿಗೆ ಬೇಕಾದ ಕಡತ, ಆರ್ಡರ್, ಪರ್ಮಿಟ್, ಸಪ್ಲಯರ್ ಕ್ವಾಲಿಫಿಕೇಶನ್, ಪೇಮೆಂಟ್ಸ್ ಇತ್ಯಾದಿಯನ್ನು ವಿಲೇವಾರಿ ಮಾಡಲಾಗುತ್ತದೆ. ಲಂಚ ನೀಡಿದರೆ ಮಾತ್ರ ಈ ಕೆಲಸ ಮಾಡಲಾಗುತ್ತದೆ ಎಂದರೆ ಅದು ಸುಲಿಗೆಗೆ ಸಮಾನ.
ಬಹಳ ಕಡೆ ಸರ್ಕಾರಿ ಕಾರ್ಯಗಳನ್ನು ಕಂಪ್ಯೂಟರೀಕರಣ ಮಾಡಲಾಗಿದೆ. ಕಚೇರಿಯೊಳಗೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಕ್ಯಾಮೆರಾ ವ್ಯಾಪ್ತಿ ಇಲ್ಲದ ಬೇರೆಡೆ ಲಂಚ ಪಡೆಯಲಾಗುತ್ತದೆ’ ಎಂದು ಲೋಕಲ್ಸರ್ಕಲ್ಸ್ ಪ್ಲಾಟ್ಫಾರ್ಮ್ನಲ್ಲಿ ತಿಳಿಸಲಾಗಿದೆ.