Search
WhatsApp alerts

Home › Karnataka

BESCOM ಸಿಬ್ಬಂದಿಗೆ ಜಾತಿ ಗಣತಿ ಕೆಲಸ: ಜನರಿಗೆ ಹೆಚ್ಚು ಬಿಲ್ ಬರೆ

administrator · Published

Caste census work for BESCOM staff: People are being billed more

Bengaluru: ರಾಜ್ಯ ಸರ್ಕಾರ ಜಾತಿ ಸಮೀಕ್ಷೆ ನಡೆಸುವ ಕೆಲಸವನ್ನು ಬೆಸ್ಕಾಂ (BESCOM) ಸಿಬ್ಬಂದಿಗೆ ಕೊಟ್ಟಿರುವುದರಿಂದ ರಾಜಧಾನಿ ಜನರಿಗೆ ಸಂಕಷ್ಟ ಎದುರಾಗಿದೆ. 2025ರ ಆಗಸ್ಟ್ 23ರಿಂದ ಮೀಟರ್ ರೀಡರ್  ಗಳಿಗೆ ಜಿಯೋ ಟ್ಯಾಗ್ ಹಾಗೂ ಸಮೀಕ್ಷೆ ಕೆಲಸ ನೀಡಲಾಗಿದೆ.

ಈ ಕಾರಣದಿಂದ ಮೀಟರ್ ರೀಡರ್ ಗಳು ಸರಿಯಾದ ಸಮಯಕ್ಕೆ ರೀಡಿಂಗ್ ತೆಗೆದು ಬಿಲ್ ಕೊಡುವುದಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಇದರಿಂದ ಎರಡು ತಿಂಗಳಿಂದ ವಿದ್ಯುತ್ ಬಿಲ್ ದಿಢೀರ್ ಏರಿಕೆಯಾಗಿ ಜನರು ಸಂಕಷ್ಟದಲ್ಲಿದ್ದಾರೆ.

ಹಿಂದೆ 11 ಅಥವಾ 12ನೇ ತಾರೀಖಿಗೆ ಬಿಲ್ ಕೊಡುತ್ತಿದ್ದ ಸಿಬ್ಬಂದಿ ಈಗ ವಿಳಂಬ ಮಾಡುತ್ತಿದ್ದಾರೆ. ಇದರಿಂದ ವಿದ್ಯುತ್ ಬಿಲ್ ಹೆಚ್ಚಾಗಿದೆ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಗೃಹಜ್ಯೋತಿ ಯೋಜನೆಯಡಿಯಲ್ಲಿ ಉಚಿತ ಕರೆಂಟ್ ಪಡೆಯುತ್ತಿದ್ದವರಿಗೂ ಕಳೆದ ಎರಡು ತಿಂಗಳಲ್ಲಿ ನೂರಾರು ರೂಪಾಯಿ ಬಿಲ್ ಬಂದಿದೆ. ಉಚಿತ ಯೂನಿಟ್ ಮೀರಿದ ಬಳಿಕ ಹೆಚ್ಚುವರಿ ಶುಲ್ಕ ಸೇರಿಸಿ ಬಿಲ್ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಸರ್ಕಾರ ಮೀಟರ್ ರೀಡರ್ ಗಳಿಗೆ ಜಾತಿ ಸಮೀಕ್ಷೆಯ ಕೆಲಸ ಕೊಟ್ಟು ಒತ್ತಡ ಹಾಕಿದ ಪರಿಣಾಮ, ಉಚಿತ ವಿದ್ಯುತ್ ಸೌಲಭ್ಯಕ್ಕೂ ಕಡಿತ ಮಾಡಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಇದೀಗ ಜನರ ಸಮಸ್ಯೆಗೆ ಯಾವ ಪರಿಹಾರ ಕೊಡುತ್ತದೆ ಎಂಬುದು ಕಾದುನೋಡಬೇಕಾಗಿದೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page