
Bengaluru: ವಿಲ್ಸನ್ ಗಾರ್ಡನ್‌ನ (Wilson Garden) ಚಿನ್ನಯ್ಯನ ಪಾಳ್ಯದಲ್ಲಿ ಆಗಸ್ಟ್ 15ರಂದು ಸಂಭವಿಸಿದ ನಿಗೂಢ ಸ್ಫೋಟದಲ್ಲಿ 8ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿದ್ದವು. ಈ ದುರಂತದಲ್ಲಿ ಮೂವರು ಮೃತಪಟ್ಟಿದ್ದು, ಪ್ರಾಥಮಿಕ ತನಿಖೆಯಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ ಎಂಬುದು ಬಹಿರಂಗವಾಗಿದೆ.
ಮನೆಯಲ್ಲಿ ರಾತ್ರಿಯೆಲ್ಲ ಗ್ಯಾಸ್ ಸೋರಿಕೆಯಾಗಿದ್ದು, ಬೆಳಗ್ಗೆ ಮಗು ಟಿವಿ ಆನ್ ಮಾಡಿದಾಗ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
- ಸ್ಫೋಟದ ದಿನ ಮುಬಾರಕ್ ಎಂಬ ಬಾಲಕ ಮೃತಪಟ್ಟಿದ್ದನು.
- ನಂತರ ಸೋಮವಾರ ತಾಯಿ ಕಸ್ತೂರಮ್ಮ ಮತ್ತು ಮಗಳು ಖಯಾಲ ಸಾವನ್ನಪ್ಪಿದರು.
- ಒಟ್ಟು 11 ಜನ ಗಾಯಗೊಂಡಿದ್ದು, ಮೂವರು ಮೃತಪಟ್ಟಿದ್ದಾರೆ.
- ಸರಸಮ್ಮ ಇನ್ನೂ ಆಸ್ಪತ್ರೆಗೆ ದಾಖಲಾಗಿದ್ದು, 7 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಸ್ಫೋಟದ ಪರಿಣಾಮ
- ಮೃತ ಕಸ್ತೂರಮ್ಮನ ಮನೆಯಲ್ಲಿ ಸ್ಫೋಟ ಸಂಭವಿಸಿದೆ.
- ಮುಬಾರಕ್ ಪಕ್ಕದ ಮನೆಯಲ್ಲಿ ವಾಸವಿದ್ದು, ತೀವ್ರ ಸ್ಫೋಟದಿಂದ ಮೊದಲ ಮಹಡಿಯ ಗೋಡೆ-ಛಾವಣಿ ಕುಸಿದಿದೆ.
- 8ಕ್ಕೂ ಹೆಚ್ಚು ಮನೆಗಳಿಗೆ ಗಂಭೀರ ಹಾನಿ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಅವರು, “ಮೇಲ್ನೋಟಕ್ಕೆ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿರುವುದು ಗೋಚರಿಸುತ್ತಿದೆ. ಈ ದುರಂತದಲ್ಲಿ ಸುಮಾರು 13 ಮನೆಗಳಿಗೆ ಹಾನಿಯಾಗಿದೆ. ಹಾನಿಗೊಳಗಾದ ಮನೆಗಳನ್ನು ಸರ್ಕಾರವೇ ದುರಸ್ತಿ ಮಾಡಿಸಿಕೊಡುತ್ತದೆ” ಎಂದು ಹೇಳಿದರು.