Bengaluru: Karnataka ಕಾಂಗ್ರೆಸ್ ಸರ್ಕಾರ (Congress Government) ಈಗ ದಿಢೀರನೆ ಹಿಂದೂ ಧರ್ಮದ ಬಗ್ಗೆ, ಹಿಂದೂಗಳ ಆಚಾರ-ವಿಚಾರದ ಬಗ್ಗೆ, ಸಂಪ್ರದಾಯ-ಪರಂಪರೆ ಬಗ್ಗೆ ಎಲ್ಲಿಲ್ಲದ ಆಸಕ್ತಿ ತೋರುವ ನಾಟಕ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ (R. Ashok) ಆರೋಪಿಸಿದ್ದಾರೆ. ಗಂಗಾ ಆರತಿಯ (Ganga Aarti) ಮಾದರಿಯಲ್ಲಿ ಕಾವೇರಿಗೆ ಆರತಿ (Cauvery Aarti) ಮಾಡುವ ಸಲುವಾಗಿ ಅಧ್ಯಯನ ಮಾಡಲು ಹರಿದ್ವಾರ ಹಾಗೂ ಕಾಶಿ ಭೇಟಿಯ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.
ಗಂಗಾ ಆರತಿ (Ganga Aarti) ಮಾದರಿಯಲ್ಲಿ ಕಾವೇರಿ ಆರತಿ (Cauvery Aarti) ನಡೆಸುವ ಸಲುವಾಗಿ ಮಂಡ್ಯ (Mandya) ಉಸ್ತುವಾರಿ ಸಚಿವ ಚಲುವರಾಯಸ್ವಾಮಿ (N Chaluvarayaswamy) ಅವರ ನೇತೃತ್ವದಲ್ಲಿ ಮಂಡ್ಯ, ಮೈಸೂರು (Mysuru) ಭಾಗದ ಶಾಸಕರು, ವಿಧಾನಪರಿಷತ್ ಸದಸ್ಯರು, ಕಾವೇರಿ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಗಳು ಈಗಾಗಲೇ ಮೂರು ದಿನಗಳ ಕಾಲ ಹರಿದ್ವಾರ ಹಾಗೂ ಕಾಶಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ಬಂದಿರುವಾಗ ಈಗ ಮತ್ತೊಮ್ಮೆ ಅಧಿಕಾರಿಗಳ ನಿಯೋಗ ಕಳುಹಿಸುತ್ತಿರುವುದು ಯಾತಕ್ಕೆ? ಎಂದು ಪ್ರಶ್ನಿಸಿದ್ದಾರೆ.
Cauveri Aarti
ಗಂಗಾರತಿ (Ganga Aarti ) ಮಾದರಿಯಲ್ಲಿ ಕಾವೇರಿ ಆರತಿ (Cauveri Aarti ) ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ (N Chaluvarayaswamy) ನೇತೃತ್ವದ ಸುಮಾರು 25ಕ್ಕೂ ಹೆಚ್ಚು ಶಾಸಕರಿರುವ ನಿಯೋಗ (Delegation) ವಾರಣಾಸಿಗೆ (Varanasi) ಭೇಟಿ ನೀಡಿದೆ. ಹರಿದ್ವಾರದಲ್ಲಿ ಗಂಗಾರತಿ ಬಗ್ಗೆ ಅಧ್ಯಯನ ಮಾಡಿದ ತಂಡ ವಾರಣಾಸಿಗೆ ತೆರಳಿ ವ್ಯವಸ್ಥೆಯನ್ನು ಅಧ್ಯಯನ ನಡೆಸಿದೆ. ಇನ್ನೆರಡು ದಿನಗಳಲ್ಲಿ ಅಧ್ಯಯನದ ವರದಿ ನೀಡುವುದಾಗಿ ಆಯೋಗ ಹೇಳಿಕೆ ನೀಡಿದೆ.