Search
WhatsApp alerts

Home › India

Chandrayaan-5 ಕೇಂದ್ರ ಅನುಮೋದನೆ: ಹೊಸ ಅಂಗಳಕ್ಕೆ ISRO ಹೆಜ್ಜೆ

administrator · Published

Chandrayaan-5: ISRO

ಇಸ್ರೋನ ಮಹತ್ವದ ಯೋಜನೆಯಾದ ಚಂದ್ರಯಾನ-5 ಮಿಷನ್‌ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಬಗ್ಗೆ ಇಸ್ರೋ (ISRO) ಅಧ್ಯಕ್ಷ ವಿ. ನಾರಾಯಣನ್ ಮಾಹಿತಿ ನೀಡಿದ್ದಾರೆ.

ಚಂದ್ರಯಾನ-5, ಚಂದ್ರನ ಮೇಲ್ಮೈ ಅಧ್ಯಯನ ಮಾಡಲು 250 ಕೆಜಿ ತೂಕದ ರೋವರ್ ಅನ್ನು ಹೊತ್ತೊಯ್ಯಲಿದೆ. ಇದನ್ನು ಹಿಂದಿನ ಚಂದ್ರಯಾನ-3 ಯಾನದಿಂದ ಭಿನ್ನವಾಗಿ ಅಭಿವೃದ್ಧಿಪಡಿಸಲಾಗಿದೆ.

ಹಿಂದಿನ ಚಂದ್ರಯಾನ ಮಿಷನ್ ಗಳು

  • ಚಂದ್ರಯಾನ-1 (2008): ಚಂದ್ರನ ರಾಸಾಯನಿಕ, ಖನಿಜ ಮತ್ತು ಭೂವೈಜ್ಞಾನಿಕ ನಕ್ಷೆ ತಯಾರಿಸುವಲ್ಲಿ ಯಶಸ್ವಿಯಾಯಿತು.
  • ಚಂದ್ರಯಾನ-2 (2019): ಶೇಕಡಾ 98 ರಷ್ಟು ಯಶಸ್ಸು ಪಡೆದರೂ, ಅಂತಿಮ ಹಂತದಲ್ಲಿ ಕೆಲವೊಂದು ಸವಾಲುಗಳನ್ನು ಎದುರಿಸಿತು.

ಚಂದ್ರಯಾನ-3 (2023): ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿಯಿತು.

ಭವಿಷ್ಯದ ಯೋಜನೆಗಳು

  • ಚಂದ್ರಯಾನ-4 (2027): ಚಂದ್ರನಿಂದ ಮಾದರಿಗಳನ್ನು ಹಿಂತಿರುಗಿಸಿ ತರಲು ಯೋಜನೆ.
  • ಚಂದ್ರಯಾನ-5: ಭಾರತ ಮತ್ತು ಜಪಾನ್ ಸಹಯೋಗದಲ್ಲಿ ಉಡಾವಣೆಗೆ ತಯಾರಿ.
  • ಭಾರತೀಯ ಬಾಹ್ಯಾಕಾಶ ನಿಲ್ದಾಣ: ಭವಿಷ್ಯದಲ್ಲಿ ಸ್ಥಾಪನೆಗೊಳ್ಳಲಿದೆ. ಇಸ್ರೋ ಬಾಹ್ಯಾಕಾಶ ಸಂಶೋಧನೆಯಲ್ಲಿ ಮತ್ತಷ್ಟು ಮಹತ್ವದ ಸಾಧನೆಗಳತ್ತ ಮುನ್ನಡೆಯುತ್ತಿದೆ.

For Daily Updates WhatsApp ‘HI’ to 7406303366

Read next

ಕೊಲುಮೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಟಾಫ್ ನರ್ಸ್ ಹುದ್ದೆ: ನವೆಂಬರ್ 25ರ ಒಳಗೆ ಅರ್ಜಿ

ಕುಂಬಾರ ಸಮುದಾಯಗಳ ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಿರಿ: ಚಿಕ್ಕಬಳ್ಳಾಪುರದಲ್ಲಿ ಮಕ್ಕಳ ವಿಜ್ಞಾನ ಸಮಾವೇಶ

You cannot copy content of this page