Chamarajanagar (Chamarajanagara) : ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ ಕಾರ್ಯಕ್ರಮದ ಭಾಗವಾಗಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ (Deputy Commissioner Charulata Somal) ಅವರು ಜನವರಿ 17 ಸೋಮವಾರ ಯಳಂದೂರು (Yelandur) ತಾಲ್ಲೂಕಿನ ಅಗರ (Agara Hobli) ಹೋಬಳಿಯ ಗೌಡಹಳ್ಳಿಯ (Gowdanahalli) ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಗ್ರಾಮ ವಾಸ್ತವ್ಯ ಮಾಡಿ ಬೆಳಿಗ್ಗೆ 10 ಗಂಟೆಯಿಂದ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
ಆಯಾ ತಾಲ್ಲೂಕಿನ ತಹಶೀಲ್ದಾರರೂ ಆಯಾ ತಾಲ್ಲೂಕಿನ ಗ್ರಾಮ ಒಂದರಲ್ಲಿ ವಾಸ್ತವ್ಯ ಮಾಡಲಿದ್ದು ಚಾಮರಾಜನಗರ ತಾಲ್ಲೂಕಿನ ಚಂದಕ ವಾಡಿ ಹೋಬಳಿಯ ಕಾಗಲವಾಡಿ ಮೋಳೆ ಗ್ರಾಮ, ಗುಂಡ್ಲುಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ನೇನೆಕಟ್ಟೆ ಗ್ರಾಮ, ಕೊಳ್ಳೇಗಾಲ ತಾಲ್ಲೂಕಿನ ಕಸಬಾ ಹೋಬಳಿಯ ಗೊಬ್ಬಳಿಪುರ ಗ್ರಾಮ ಹಾಗೂ ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಹೋಬಳಿಯ ಮೋಡಳ್ಳಿ (ಕಂಚುಗಾರಳ್ಳಿ) ಗ್ರಾಮದಲ್ಲಿ ತಹಶೀಲ್ದಾರರು ವಾಸ್ತವ್ಯ ಹೂಡಲಿದ್ದಾರೆ.