Chamarajanagara : ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿ 70 ಮಕ್ಕಳು ಅಸ್ವಸ್ಥರಾದ (Food Poisoning) ಘಟನೆ ಹನೂರು ತಾಲ್ಲೂಕಿನ ವಡಕೆಹಳ್ಳದ ಸರ್ಕಾರಿ ಉನ್ನತೀಕರಿಸಿದ ಶಾಲೆಯಲ್ಲಿ (Vadakehalla Government School) ನಡೆದಿದೆ. 170 ಮಕ್ಕಳಿರುವ ಶಾಲೆಗೆ ಸೋಮವಾರ 90 ಮಕ್ಕಳು ಹಾಜರಾಗಿದ್ದರು. ಈ ಪೈಕಿ 70 ಮಕ್ಕಳು ಮಧ್ಯಾಹ್ನ ಶಾಲೆಯಲ್ಲಿ ಬಿಸಿಯೂಟ (Midday Meal) ಸೇವಿಸಿದ್ದಾರೆ.
ಊಟ ಸೇವಿಸಿದ ನಂತರ ಮಕ್ಕಳು ವಾಂತಿ ಮಾಡುತ್ತಿದ್ದುದನ್ನು ಗಮನಿಸಿದ ಶಿಕ್ಷಕರು ಕ್ರಮವಾಗಿ ಕೆಲವು ಮಕ್ಕಳನ್ನು ಆಸ್ಪತ್ರೆಗೆ ಕಳುಹಿಸಿದ್ದರು.ವಿಷಯ ಗೊತ್ತಾದ ಕೂಡಲೇ ಶಾಲೆಗೆ ಧಾವಿಸಿದ ಪೋಷಕರು ಉಳಿದ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದರು. ಅದೃಷ್ಟವಶಾತ್ ಯಾರೂ ಗಂಭೀರವಾಗಿ ಅಸ್ವಸ್ಥಗೊಂಡಿಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ತಹಶೀಲ್ದಾರ್ ಎಚ್.ನಾಗರಾಜು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ ಅವರು ಆಸ್ಪತ್ರೆಗಳಿಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.