
ಐಸಿಸಿ ಚಾಂಪಿಯನ್ಸ್ ಟ್ರೋಫಿಯ (Champions Trophy) ಮೊದಲ ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕಿಸ್ತಾನ 60 ರನ್‌ಗಳ ಭಾರೀ ಸೋಲು ಅನುಭವಿಸಿದೆ. ನ್ಯೂಜಿಲೆಂಡ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಪಾಕ್ ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಎಲ್ಲ ವಿಭಾಗಗಳಲ್ಲೂ ವೈಫಲ್ಯ ಕಂಡಿತು.
ಕರಾಚಿಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 320 ರನ್ ಗಳಿಸಿ ಪಾಕ್ ಮೇಲೆ ಒತ್ತಡ ಹೇರಿತು. ಟಾಮ್ ಲೇಥಮ್ (118), ವಿಲ್ ಯಂಗ್ (107) ಮತ್ತು ಗ್ಲೆನ್ ಫಿಲಿಪ್ಸ್ (60) ಅಬ್ಬರದ ಆಟವಾಡಿದರು. ಬೃಹತ್ ಗುರಿ ಬೆನ್ನಟ್ಟಿದ ಪಾಕ್ 47.2 ಓವರ್‌ಗಳಲ್ಲಿ 260 ರನ್‌ಗಳಿಗೆ ಆಲೌಟ್ ಆಗಿ 60 ರನ್‌ಗಳ ಸೋಲು ಕಂಡಿತು.
ಈ ಸೋಲಿನಿಂದ ಪಾಕಿಸ್ತಾನ ಸೆಮಿಫೈನಲ್ ರೇಸ್‌ನಲ್ಲಿ ಮುಂದುವರೆಯಲು ಕಠಿಣ ಹಾದಿ ಎದುರಿಸಬೇಕಾಗಿದೆ.